ಬೆಂಗಳೂರು: ನಾಗಮಂಗಲ ಗಲಭೆಗೆ (Nagamangala Violence) ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಇದೊಂದು ಪ್ರೀ ಪ್ಲ್ಯಾನ್. ಪಿಎಫ್‌ಐ (PFI) ಸಂಘಟನೆ ನಾಗಮಂಗಲದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಆರೋಪ ಮಾಡಿದ್ದಾರೆ.
ಅಶ್ವಥ್ ನಾರಾಯಣ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿ ಇಂದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ಸಲ್ಲಿಕೆ ಮಾಡಿತು. ವರದಿ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ, ರಾಜಕೀಯ ತುಷ್ಟೀಕರಣವೇ ಇಂತಹ ಘಟನೆಗೆ ಕಾರಣ. ವಿಭಜನೆ ರಾಜಕೀಯಕ್ಕಾಗಿ ಇಂತಹ ಘಟನೆ ನಡೆದಿದೆ. ಪೊಲೀಸರ ವೈಫಲ್ಯ ಇಲ್ಲಿ ಇದೆ. ಪೊಲೀಸರ ಕೈಯನ್ನು ಈ ಸರ್ಕಾರ ಕಟ್ಟಿ ಹಾಕಿದೆ ಅಂತ ಆರೋಪ ಮಾಡಿದರು.
Advertisement
Advertisement
ಮೆರವಣಿಗೆಯಲ್ಲಿ ಭಾಗಿಯಾದವರು 25-30 ಜನ ಮಾತ್ರ. ಕಳೆದ ವರ್ಷವೂ ಇದೇ ರೀತಿ ಘಟನೆ ಆಗಿದೆ. ಆದರೂ ಈ ವರ್ಷ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರೀ ಪ್ಲ್ಯಾನ್ ಮಾಡಿ ಬೆಂಕಿ ಹಾಕಿದ್ದಾರೆ, ಮಾಸ್ಕ್ ಹಾಕಿಕೊಂಡು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನಾಗಮಂಗಲ ಪಿಎಫ್‌ಐ ಕಾರ್ಯಚಟುವಟಿಕೆಗೆ ನೆಲೆಯಾಗಿದೆ. ಕೇರಳ ಭಾಗದ ವ್ಯಕ್ತಿಗಳು ಭಾಗಿಯಾಗಿದ್ದಾರೆ ಅಂತ ಗೃಹಸಚಿವರು ಹೇಳಿದ್ದಾರೆ. ಬಾಂಗ್ಲಾದೇಶದವರು ನಾಗಮಂಗಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಎಫ್‌ಐ ನಿಷೇಧ ಆಗಿರುವ ಸಂಸ್ಥೆಯಾದರೂ ಇಲ್ಲಿ ಚಟುವಟಿಕೆಗಳನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ
Advertisement
ಘಟನೆ ಸಂಬಂಧ UAPA ಕೇಸ್ ಯಾರ ಮೇಲೂ ಹಾಕಿಲ್ಲ. ಇಂಟಲಿಜೆನ್ಸ್ ಸಂಪೂರ್ಣ ಫೇಲ್ ಆಗಿದೆ. ನಮ್ಮ ಕಾಲದಲ್ಲಿ ಇಂತಹ ಘಟನೆ ಆಗಿರಲಿಲ್ಲ.ಈ ಸರ್ಕಾರದಲ್ಲಿ 8-10 ಕಡೆ ಇಂತಹ ಘಟನೆಗಳು ನಡೆದಿವೆ. ಈ ಸರ್ಕಾರದಲ್ಲಿ ಏನ್ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಬಾಂಗ್ಲಾದೇಶದಲ್ಲಿ ಆದಂತೆ ನಾವು ನುಗ್ಗುತ್ತೇವೆ ಅಂತಾರೆ. ಅವರ ಮೇಲೆ ಕೇಸ್ ಹಾಕಲ್ಲ. ಇಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು ವಿಪಕ್ಷಗಳ ಮೇಲೆ ಕೇಸ್ ಹಾಕೋ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಕೃತ್ಯ ಮಾಡಿದವರನ್ನು ಬಿಟ್ಟು ನಿರಾಪರಾಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಅವರ ಮೇಲೆ ಕೇಸ್ ಆಗಿಲ್ಲ. ನಾಗಮಂಗಲ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸಬೇಕು. ಹಿಂದೂ ಸಮಾಜದ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಹಿಂದೂಗಳ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಘಟನೆಯಲ್ಲಿ ಭಾಗಿಯಾಗಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. 100% ನಷ್ಟ ಆದವರಿಗೆ ಪರಿಹಾರ ಸರ್ಕಾರ ಕೊಡಬೇಕು. ಮುಂದೆ ಸರ್ಕಾರದ ವಿರುದ್ದ ಹೇಗೆ ಪ್ರತಿಭಟನೆ ಮಾಡಬೇಕು ಅಂತ ಹಿರಿಯರು ಕೂತು ನಿರ್ಧಾರ ಮಾಡುತ್ತೇವೆ ಎಂದರು.