ದಂಗೆಕೋರರು ಎಂದು ಭಾವಿಸಿ ಗುಂಡಿನ ದಾಳಿ-13 ಮಂದಿ ದುರ್ಮರಣ

Public TV
2 Min Read
nagaland

ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ಭದ್ರತಾ  ಸಿಬ್ಬಂದಿ ದಂಗೆಕೋರರ ವಿರುದ್ಧ ಕಾರ್ಯಾಚರಣೆ ಸಂದರ್ಭದಲ್ಲಿ  ದಂಗೆಕೋರರು ಎಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿಕೊಂದಿರುವ ಘಟನೆ  ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ಈ ಘಟನೆಯಲ್ಲಿ 13 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಮ್ನಾಲೆನ್ಸಾ ದೃಢಪಡಿಸಿದ್ದಾರೆ

ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಟ್ರಕ್ ನಲ್ಲಿ ವಾಪಸ್ಸಾಗುತ್ತಿದ್ದರು. ದೈನಂದಿನ ವೇತನ ಪಡೆಯುತ್ತಿದ್ದ ಕಾರ್ಮಿಕರಾಗಿದ್ದ ಇವರು ವಾರಾಂತ್ಯಗಳಲ್ಲಿ ಮಾತ್ರ ಮನೆಗೆ ಬರುತ್ತಿದ್ದರು. ಅಂತೆಯೇ ಶನಿವಾರದಂದು ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಅವರನ್ನು ಭಯೋತ್ಪಾದಕರೆಂದು ಭಾವಿಸಿ ಪ್ಯಾರಾ ಕಮಾಂಡೋಗಳು ದಾಳಿ ನಡೆಸಿದ್ದಾರೆ. ಇವರಿನ್ನೂ ಬರಲಿಲ್ಲ ಎಂದು ಹುಡುಕುತ್ತಾ ಹೋದ ಸ್ಥಳೀಯರಿಗೆ ಟ್ರಕ್ ಮತ್ತು 13 ಮಂದಿ ನಾಗರಿಕರ ಮೃತದೇಹ ಸಿಕ್ಕಿದೆ. ಅದನ್ನು ನೋಡಿ ಕೋಪಗೊಂಡ ಜನರು ಭದ್ರತಾ ಪಡೆಯ ಎರಡು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

ನಾಗಾಲ್ಯಾಂಡ್‍ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ. ಈ ಗುಂಡಿನ ದಾಳಿ ತೀವ್ರ ಖಂಡನೀಯ. ಅನ್ಯಾಯವಾಗಿ ಬಲಿಯಾದವರ ಸಾವಿಗೆ ನ್ಯಾಯ ಒದಗಿಸುತ್ತೇವೆ. ಸ್ಥಳೀಯರು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, ನಾಗಾಲ್ಯಾಂಡ್‍ನ ಓಟಿಂಗ್‍ನಲ್ಲಿ ನಡೆದ ಘಟನೆಯಿಂದ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಎಸ್‍ಐಟಿ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *