ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಅವರು ಇಂದು (ಡಿ.4) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆಗೆ ಯಾರೆಲ್ಲಾ ಬರಲಿದ್ದಾರೆ ಎಂಬ ಅತಿಥಿಗಳ ಲಿಸ್ಟ್ ರಿವೀಲ್ ಆಗಿದೆ.
ನಾಗಚೈತನ್ಯ ಮದುವೆಗೆ ರಾಮ್ ಚರಣ್ ದಂಪತಿ, ಮಹೇಶ್ ಬಾಬು (Mahesh Babu) ದಂಪತಿ, ರಾಜಮೌಳಿ, ನಯನತಾರಾ, ಪ್ರಭಾಸ್(Prabhas), ಅಲ್ಲು ಅರ್ಜುನ್, ಸುಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಒಟ್ಟು 300 ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆಯಂತೆ.
ನಾಗಾರ್ಜುನ ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಪುಡಿಯೋದಲ್ಲಿ ಇಂದು (ಡಿ.4) ಮದುವೆ ನಡೆಯಲಿದೆ. ರಾತ್ರಿ 8:15 ವೇಳೆ ಮದುವೆ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು ಕೂಡ ಸಂಭ್ರಮದಿಂದ ನೆರವೇರಿದೆ. ಇದನ್ನೂ ಓದಿ:ಪವನ್ ಕಲ್ಯಾಣ್‌ಗೆ ಥ್ಯಾಂಕ್ಯೂ ಎಂದ ಐಕಾನ್ ಸ್ಟಾರ್
ಅಂದಹಾಗೆ, ಸಮಂತಾ (Samantha) ಜೊತೆ 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದಾಗಿ 2021ರಲ್ಲಿ ಅನೌನ್ಸ್ ಮಾಡಿದರು. ಈಗ ಶೋಭಿತಾ ಜೊತೆ ನಟ 2ನೇ ಮದುವೆಗೆ ರೆಡಿಯಾಗಿದ್ದಾರೆ.