ಸ್ಟಾರ್ ಜೋಡಿ ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ಡಿವೋರ್ಸ್ ಯಾಕೆ ಪಡೆದುಕೊಂಡರು ಎನ್ನುವ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲವಿತ್ತು. ಪ್ರೀತಿಸಿ ಮದುವೆ ಆದ ಈ ಜೋಡಿ ಇಂಥದ್ದೊಂದು ತೀರ್ಮಾನವನ್ನು ತಗೆದುಕೊಳ್ಳಲು ಕಾರಣ ಏನಿರಬಹುದು ಎನ್ನುವ ಕುತೂಹಲವೂ ಅವರದ್ದಾಗಿದೆ. ಹಲವರು ನಾನಾ ಕಾರಣಗಳನ್ನು ಕೊಟ್ಟರೂ, ಅವರಿಬ್ಬರೂ ಮಾತ್ರ ಆ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಮೊದಲ ಬಾರಿಗೆ ನಾಗ ಚೈತನ್ಯ ಡಿವೋರ್ಸ್ (Divorce) ಕಾರಣವನ್ನು ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಾಗ ಚೈತನ್ಯ, ‘ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಸಿಪ್ ಕಾಲಂಗಳಲ್ಲಿ ಬಂದ ಸುದ್ದಿಗಳೇ ನಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ. ಊಹಾಪೋಹ ಸುದ್ದಿಗಳು ಬಂದಾಗ ನಮ್ಮಿಬ್ಬರ ಮಧ್ಯ ಜಗಳವಾಗುತ್ತಿತ್ತು. ಮೊದಲ ಮೊದಲು ಅದಕ್ಕೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ, ವಿಪರೀತ ಎನ್ನುವಂತೆ ಸುದ್ದಿಗಳು ಹರಡಿದವು. ಅದು ಡಿವೋರ್ಸ್ ಗೆ ಕಾರಣವಾಯಿತು’ ಎಂದಿದ್ದಾರೆ.
ಇಬ್ಬರೂ ಒಂದೇ ವೃತ್ತಿಯಲ್ಲಿದ್ದರೂ, ಗಾಸಿಪ್ ಬರುವುದು ಸಹಜ ಎಂದು ಗೊತ್ತಿದ್ದರೂ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದಾಗಿ ಇಬ್ಬರೂ ನೆಮ್ಮದಿಯಿಂದ ಇರುವುದಕ್ಕೆ ಆಗಲಿಲ್ಲ. ಹಾಗಾಗಿ ದೂರ ಆಗುವಂತಹ ನಿರ್ಧಾರಕ್ಕೆ ಬರಬೇಕಾಯಿತು. ಸಮಂತಾ ಎಲ್ಲಿ ಇದ್ದರೂ ಚೆನ್ನಾಗಿರಲಿ. ಖುಷಿಯಾಗಿರಲಿ’ ಎಂದಿದ್ದಾರೆ ನಾಗ ಚೈತನ್ಯ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ
ಕಳೆದ ಎರಡು ವರ್ಷಗಳಿಂದ ಇಬ್ಬರೂ ದೂರವಿದ್ದರೂ, ಕಾನೂನು ಪ್ರಕಾರ ಡಿವೋರ್ಸ್ ಆಗಿ ಒಂದು ವರ್ಷ ಕಳೆದಿವೆ. ಆದರೂ, ಇಬ್ಬರ ಮಧ್ಯದ ಗಾಸಿಪ್ ಇನ್ನೂ ನಿಂತಿಲ್ಲ ಎಂದು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ ನಾಗ ಚೈತನ್ಯ. ಈಗಲೂ ಬೇರೆ ಬೇರೆ ನಟಿಯರ ಜೊತೆ ಸಂಬಂಧ ಬೆಸೆದು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.