ಡಾಲಿ ಧನಂಜಯ್ ನಿರ್ಮಾಣದ ‘ವಿದ್ಯಾಪತಿ’ (Vidyapati) ಸಿನಿಮಾ ನಾನಾ ವಿಧದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಮೇಕಿಂಗ್‌ನಿಂದಲೇ ಗಮನ ಸೆಳೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆ ಹರಟೆಯ ಹಾಡಿಗೆ ನವರಸ ನಾಯಕ ಜಗ್ಗೇಶ್ (Jaggesh) ಧ್ವನಿಯಾಗಿದ್ದಾರೆ. ಅಯ್ಯೋ ವಿಧಿಯೇ ಎಂದು ಶುರುವಾಗುವ ಈ ಹಾಡು ಸಖತ್ ಫನ್ ಆಗಿ ಮೂಡಿ ಬಂದಿದೆ. ಈ ಹಾಡಿನಲ್ಲಿ ರಂಗಾಯಣ ರಘು ಕೂಡ ಹೆಜ್ಜೆ ಹಾಕಿರುವುದು ವಿಶೇಷ.
‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ‘ಉಪಾಧ್ಯಕ್ಷ’ನ ಬೆಡಗಿ ಮಲೈಕಾ ವಸೂಪಾಲ್ (Malaika Vasupal) ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್‌ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ. ಇದನ್ನೂ ಓದಿ:ಹ್ಯಾಪಿ ಬರ್ತ್‌ಡೇ ಗೊಲ್ಲು: ಸಹೋದರನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್
View this post on Instagram
ಈ ಹಿಂದೆ ‘ಇಕ್ಕಟ್’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ. ‘ಟಗರು ಪಲ್ಯ’ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ (Daali Dhananjay) ಇದೀಗ ‘ವಿದ್ಯಾಪತಿ’ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಹಾಸ್ಯ ಕೂಡ ಇರಲಿದೆ.