`ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯಗೆ ಹಲವು ಬಗೆಯ ಪಾತ್ರಗಳು ಅರಸಿ ಬರುತ್ತಿದೆ. ಸದ್ಯ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಿಂದಿ ಸಿನಿಮಾ ಅವಕಾಶ ಬಂದಾಗ ನಿರಾಕರಿಸಿದ್ದು, ಯಾಕೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಸದ್ಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯಗಳು ನಿಧಾನಕ್ಕೆ ಶುರುವಾಗಿದೆ. ಬಾಲಿವುಡ್‌ನ ಡೆಬ್ಯೂ ಚಿತ್ರದ ಬಗ್ಗೆ ಮಾತನಾಡುವಾಗ ತಾವು ಯಾಕೆ ಹಿಂದಿ ಚಿತ್ರದಿಂದ ದೂರ ಸರಿಯುತ್ತಿದ್ದರು ಅಂತಾ ಮಾತನಾಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಹಿಂದಿ ಸಿನಿಮಾಗಳಿಂದ ದೂರವಿದ್ದೆ ಅಂತಾ ನಾಗಚೈತನ್ಯ ಹೇಳಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಕಾರಣ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಕಷ್ಟ ಎಂದರು. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್
View this post on Instagram
`ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಮೊದಲು ನಿರಾಕರಿಸಿದ್ದೆ, ಆದರೆ ಆಮೀರ್ ಖಾನ್ ಅವರೇ ಪಾತ್ರದ ಬಗ್ಗೆ ಜತೆಗೆ ಹೈದರಾಬಾದ್‌ನಿಂದ ಬರುವ ಹುಡುಗನ ಕಥೆಯಾಗಿದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.