‘ನಾಡಸಿಂಹ ಕೆಂಪೇಗೌಡ’ ಸಾಂಗ್ ರಿಲೀಸ್

Public TV
2 Min Read
Nadasimha Kempegowda 2

ಮ್ಮ‌ ಸಾಮಾಜಿಕ ಕಾರ್ಯಗಳ‌ ಮೂಲಕ ಜನರ‌ ಮನ‌ ಗೆದ್ದಿರುವ ಹೆಚ್ ಎಂ ಕೃಷ್ಣಮೂರ್ತಿ ಅವರು ನಿರ್ಮಿಸಿ ಹಾಗು ಕೆಂಪೇಗೌಡರ ಪಾತ್ರದಲ್ಲೂ ಅಭಿನಯಿಸಿರುವ ನಾಡಪ್ರಭು ಶ್ರೀಕೆಂಪೇಗೌಡರ ಕುರಿತಾದ “ನಾಡಸಿಂಹ ಕೆಂಪೇಗೌಡ” (Nadasimha Kempegowda) ಎಂಬ ಹಾಡಿನ ಲೋಕಾರ್ಪಣೆ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅದ್ದೂರಿಯಾಗಿ ನೆರವೇರಿತು. ಜೆ.ಕೆ ಶರ್ಮ ಗುರೂಜಿ, ನಟ ವಸಿಷ್ಠ ಸಿಂಹ, ಹಿರಿಯ ನಟ ಅಶೋಕ್, ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಟರಾದ ಧರ್ಮ, ತಬಲ ನಾಣಿ, ನೀನಾಸಂ ಅಶ್ವಥ್, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಹೆಚ್ ಎಂ ಕೃಷ್ಣಮೂರ್ತಿ ಅವರು ಹಾಡಿನ ಬಗ್ಗೆ ಮಾತನಾಡಿದರು. ‌

Nadasimha Kempegowda 1

ನಾನು ಕೆಂಪೇಗೌಡರ ಆರಾಧಕ ಎಂದು ಮಾತನಾಡಿದ ಹೆಚ್ ಎಂ ಕೃಷ್ಣಮೂರ್ತಿ ಅವರು, ಬೆಂಗಳೂರು ಹಾಗೂ ಸುತ್ತಮುತ್ತಲ್ಲಿನ ಊರುಗಳಿಗೆ ಮಾಗಡಿ ಕೆಂಪೇಗೌಡರು ಮಾಡಿರುವ ಉಪಕಾರ ಮಹತ್ತರವಾದ್ದದ್ದು. ಅಂತಹ ಪುಣ್ಯತ್ಮರ ಸ್ಮರಣೆಗಾಗಿ ಈ ಹಾಡನ್ನು ನಿರ್ಮಿಸಿದ್ದೇನೆ. ಮೊದಲ ಬಾರಿಗೆ ಕೆಂಪೇಗೌಡರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಕೆಂಪೇಗೌಡರ ಬಗ್ಗೆ ತಿಳಿಸುವ ಈ ಹಾಡು ನಮ್ಮ ಎ ಕೆ ಜಿ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲಾ ಗಣ್ಯರಿಗೆ ಧನ್ಯವಾದ. ಕೆ.ರಾಮನಾರಾಯಣ್ ಅವರು ಬರೆದಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಶಂಕರ್ ಮಹಾದೇವನ್ ಮತ್ತು ಅನುರಾಧ ಭಟ್ ಗಾಯನ ವಿದೆ . ಭಜರಂಗಿ ಮೋಹನ್ ನೃತ್ಯ ನಿರ್ದೇಶನ. ಕೃಷ್ಣ ಕುಮಾರ್ ಛಾಯಾ ಗ್ರಹಣ ಪುನೀತ್ ಸಂಕಲನ ವಿದೆ .

 

ನಾನು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಟಿ.ಎಸ್ ನಾಗಾಭರಣ (Nagabharana), ವಿನಯಪ್ರಸಾದ್, ಧರ್ಮ, ನೀನಾಸಂ ಅಶ್ವತ್, ಮುನಿ, ಹೆಚ್ ವಾಸು, ವಿಕ್ಟರಿ ವಾಸು ಮುಂತಾದವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರಿ ಆಸುಪಾಸಿನಲ್ಲಿದೆ. ಅಂತಹ ಸ್ಥಳಗಳನ್ನು ನಮ್ಮ ಯೂಟ್ಯೂಬ್ ಚಾನಲ್ ಮೂಲಕ ಪರಿಚಯ ಮಾಡಿಕೊಡುತ್ತಿದ್ದೇನೆ. ಕೆಂಪೇಗೌಡರ ಕುರಿತು ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ. ಈ ಹಾಡು ಅದ್ದೂರಿಯಾಗಿ ಹಾಗೂ ಅದ್ಭುತವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.

Share This Article