ಬೆಂಗಳೂರು: ರಾಜ್ಯ ಸರ್ಕಾರವೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಮಾಡಲಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಿಸೋದನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ವಿತರಿಸಲಿದೆ ಸ್ಪಷ್ಟಪಡಿಸಿದರು.
ಜರ್ಮನಿ ಕಂಪೆನಿಯ ಬ್ಯಾಟರಿ ಚಾಲಿತ ಯಂತ್ರದ ಬೋಟ್‍ಗಳನ್ನು ಪ್ರಾಯೋಗಿಕವಾಗಿ ಬಳಸಲು ಚಿಂತನೆ ನಡೆದಿದ್ದು, ಇದರ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಮಾಡುತ್ತೇವೆ. ಮೀನುಗಾರಿಕೆ ಬಳಕೆಗೆ ಫ್ಲೋಟಿಂಗ್ ಜೆಟ್ಟಿ ತರಲು ಚಿಂತನೆ ನಡೆದಿದೆ. ಈಗಾಗಲೇ ಗೋವಾದಲ್ಲಿ ಫ್ಲೋಟಿಂಗ್ ಜೆಟ್ಟಿ ಇದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇವೆ ಹಾಗೂ ಮೀನುಗಾರರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ಸಾಲ ಸೌಲಭ್ಯ ಸಿಗಲಿದೆ ಎಂದರು.
ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ನಾವು ಸರ್ಕಾರದಿಂದ ಕೊಡುವ ಸಹಾಯಧನ 5 ರೂಪಾಯಿ ಕೊಡುವುದನ್ನ ನಿಲ್ಲಿಸೋದಿಲ್ಲ ಅದನ್ನು ಹಾಗೇ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಹಾಲಿನ ಪೌಡರ್ ಮಾಡಲು ಹೆಚ್ಚು ವೆಚ್ಚ ತಗಲುವದರಿಂದ ಹಾಗಾಗಿ ಪೌಡರ್ ಮಾಡಲ್ಲ. ಆದ್ರೆ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುವ ಚಿಂತನೆಗಳಿವೆ. ಬೇರೆ ರಾಜ್ಯಗಳಿಂದ ಹಾಲು ರಾಜ್ಯಕ್ಕೆ ಬರುತ್ತಿದ್ದು, ಜಿಎಸ್ ಟಿ ಬಂದ ಮೇಲೆ ಹೊರ ರಾಜ್ಯದ ಹಾಲು ಮಾರಾಟಕ್ಕೆ ನಿರ್ಬಂಧ ಹಾಕುವುದು ಕಷ್ಟ. ಆದ್ರೆ ಕಲಬೆರಕೆ ಹಾಲಿನ ಬಗ್ಗೆ ಕ್ರಮ ಕೈಗೊಳ್ಳಲು ಶೀಘ್ರ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಸದ್ಯ ಹಾಲಿನ ದರ ಹೆಚ್ಚಳದ ಬಗ್ಗೆ ಕುರಿತು ಯಾವುದೇ ಪ್ರಸ್ತಾಪ ಸರ್ಕಾರ ಮುಂದೆ ಬಂದಿಲ್ಲ. ಹಾಲು ಒಕ್ಕೂಟಗಳಿಂದಲ್ಲೂ ಕೂಡ ಯಾವುದೇ ದರ ಏರಿಕೆ ಪ್ರಸ್ತಾಪಗಳು ಬಂದಿಲ್ಲ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.