ಪ್ರಾಚೀನ ಶೈಲಿ ಆಗಾಗ ಪುನಾವರ್ತನೆ ಆಗುತ್ತಿರುವ ಕಾಲವಿದು. ಪ್ರಾಚೀನ ಆಭರಣ, ಸೀರೆ ಈಗ ಜನಪ್ರಿಯ ಶೈಲಿಯಾಗಿದೆ. ಇದೀಗ ಹಳೆಯ ಕಾಲದ ಸೀರೆಯಲ್ಲಿ ಹೊಸ ರೂಪದಲ್ಲಿ ಮಿಂಚಿದ್ದಾರೆ ವಜ್ರಕಾಯ ಬೆಡಗಿ ನಭಾ ನಟೇಶ್.
ಚಿಕ್ಕಮಗಳೂರಿನ ಈ ಚೆಲುವೆ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ವಜ್ರಕಾಯ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆ್ಯಕ್ಟೀವ್ ಇರುವ ಈ ಚೆಲುವೆ ಇದೀಗ ಅಮ್ಮನ ಹಳೆಯ ಸೀರೆಗೆ ಹೊಸ ಮೆರುಗು ಕೊಟ್ಟು ಈ ದೀಪಾವಳಿ ಹಬ್ಬಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಮ್ಮನ ಹಳೆಯ ಫೋಟೋದೊಂದಿದೆ ತಮ್ಮ ಫೋಟೋವನ್ನ ಸೇರಿಸಿ ಅದರ ವಿಶೇಷತೆಯನ್ನು ಬಿಚ್ಚಿಟ್ಟಿದ್ದಾರೆ. “ಅಮ್ಮನ ಸೀರೆಯುಡೋದ್ರಲ್ಲಿ ಅದೇನೋ ಮ್ಯಾಜಿಕ್ ಇದೆ, ಅದರಲ್ಲೂ ಅಪ್ಪ ಅಮ್ಮನಿಗಾಗಿ ನೀಡಿದ ಮೊದಲ ಉಡುಗೊರೆಯ ಸೀರೆ” ಎಂದಿದ್ದಾರೆ.
ಹಳೆಯ ಸೀರೆಗೆ ಹೊಸ ಡಿಸೈನರ್ ರವಿಕೆ ಧರಿಸಿ ಪೋಸ್ ಕೊಟ್ಟಿದ್ದಾರೆ ನಭಾ. ಸೋಶಿಯಲ್ ಮೀಡಿಯಾದಲ್ಲಿ ಗ್ಲ್ಯಾಮರ್ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಪ್ರಚಲಿತದಲ್ಲಿರುವ ನಭಾ ಇದೀಗ ಸಾಂಪ್ರದಾಯಿಕ ಲುಕ್‌ಗೆ ಆಧುನಿಕತೆ ಟಚ್ ಕೊಟ್ಟು ಮಿಂಚಿದ್ದಾರೆ. ನಭಾ ಸೀರೆಯ ಗುಟ್ಟು ಹಾಗೂ ಲುಕ್ಕು ಎರಡೂ ವೈರಲ್ ಆಗಿದೆ.

