ಕನ್ನಡದ ಬ್ಯೂಟಿ ನಭಾ ನಟೇಶ್ ಅವರು ‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು. ಬಳಿಕ ತೆಲುಗಿನಲ್ಲಿ ಬ್ಯುಸಿಯಾದ್ರು. ಸದ್ಯ ಫೋಟೋಶೂಟ್‌ನಲ್ಲಿ ಗ್ಲ್ಯಾಮರಸ್ ಆಗಿ ಮಿಂಚ್ತಿರೋ ನಭಾ ನಟೇಶ್ (Nabha Natesh) ಅವರು ಏನ್ಮಾಡ್ತಿದ್ದಾರೆ? ಯಾವ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ತನ್ನ ಅವಳಿ ಮಕ್ಕಳಿಗೆ ‘ಪಠಾಣ್’ ಮತ್ತು ‘ಜವಾನ್’ ಹೆಸರಿಡುವೆ ಎಂದ ಶಾರುಖ್ ಅಭಿಮಾನಿ
ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಪರಿಚಿತರಾದ ನಟಿ ನಭಾ ಅವರು ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲಕ ಸೈ ಎನಿಸಿಕೊಂಡರು. ಕನ್ನಡದ ಒಂದೆರೆಡು ಚಿತ್ರಗಳಲ್ಲಿ ನಟಿಸಿದ ಈ ಶೃಂಗೇರಿ ಬೆಡಗಿ, ಟಾಲಿವುಡ್‌ನತ್ತ ಮುಖ ಮಾಡಿದ್ರು.
‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ರಾಮ್ ಪೋತಿನೇನಿಗೆ ನಭಾ ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ‘ಡಿಸ್ಕೋ ರಾಜಾ’ ಸಿನಿಮಾದಲ್ಲಿ ರವಿ ತೇಜಾ(Ravi Teja) ಜೊತೆ ನಟಿಸಿದ್ದರು. ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ನಟಿ ನಭಾ ಅವರು ಹೊಸ ಬಗೆಯ ಪಾತ್ರದ ಹುಡುಕಾಟದಲ್ಲಿದ್ದಾರೆ.
ನಭಾ ನಟೇಶ್ ಅವರು ಕಳೆದ ವರ್ಷ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಹಾಗಾಗಿ ನಟಿ ಯಾವುದೇ ಸಿನಿಮಾ ಒಪ್ಪಿರಲಿಲ್ಲ. ಈಗ ಅಪಘಾತದಿಂದ ಅವರು ಚೇತರಿಕೊಂಡಿದ್ದಾರೆ. ಮತ್ತೆ ಸಿನಿಮಾ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಸೂಕ್ತ ಅವಕಾಶಕ್ಕಾಗಿ ನಭಾ ಕಾಯ್ತಿದ್ದಾರೆ.
ಅಪಘಾತದ ಬಳಿಕ ಖಾಲಿ ಕುಳಿತಿದ್ದ ನಟಿ ಗುಣಮುಖರಾದ ಮೇಲೂ ಅವಕಾಶ ಸಿಗುತ್ತಿಲ್ಲ. ಸಿನಿಮಾ ಚಾನ್ಸ್‌ಗಾಗಿ ನಭಾ ಬಗೆ ಬಗೆಯ ರೀತಿಯಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಸದ್ಯ ಸೌತ್ ಸಿನಿಮಾರಂಗದಲ್ಲಿ ರಶ್ಮಿಕಾ, ಶ್ರೀಲೀಲಾ, ಕೃತಿ ಶೆಟ್ಟಿ ಅವರ ಮೂವಿ ಮೇನಿಯಾ ಜೋರಾಗಿದೆ. ಇದರ ನಡುವೆ ನಭಾಗೆ ಒಂದೊಳ್ಳೆಯ ಅವಕಾಶ ಸಿಕ್ಕಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.