ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಆ ಸಿನಿಮಾಗಳ ಸಾಲಿಗೆ ಈಗ ಹೊಸ ಸೇರ್ಪಡೆ ‘ನಾನ್ ಪೋಲಿ’ (Naan Poli) ಸಿನಿಮಾ. ಹೊಸ ತಂಡದ ಹೊಸ ಪ್ರಯತ್ನದ ಸಿನಿಮಾ ಇದಾಗಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ
‘ನಾನ್ ಪೋಲಿ’ ಎಂಬ ವಿಭಿನ್ನ ಟೈಟಲ್‌ನೊಂದಿಗೆ ಹೊಸಬರ ಸಿನಿಮಾ ಬರುತ್ತಿದೆ. ಇದೀಗ ಈ ಚಿತ್ರದ ನಿರ್ದೇಶಕ ಹಾಗೂ ನಟ ಯಶವಂತ್, ನಟಿ ದಿಶಾ ಮತ್ತು ಚಿತ್ರದ ತಂಡದವರೆಲ್ಲ ಸೇರಿ ಭಾನುವಾರ ಬೆಳಗ್ಗೆ 10 ಗಂಟೆಗೆ ನಟ ಶ್ರೀಮುರುಳಿರನ್ನು (Srimurali) ಭೇಟಿಯಾಗಿ ಟ್ರೈಲರ್ ಅನ್ನು ಬಿಡುಗಡೆ ಮಾಡಿಸಿದ್ದಾರೆ. ಈ ಚಿತ್ರದ ಟ್ರೈಲರ್ ವೀಕ್ಷಿಸಿದ ಶ್ರೀಮುರುಳಿ ಅವರು ಬಹಳ ಇಂಟರೆಸ್ಟಿಂಗ್ ಆಗಿದೆ ಹಾಗೂ ಚಿತ್ರದ ಶೀರ್ಷಿಕೆ ವಿಭಿನ್ನವಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ
ಈ ಚಿತ್ರದ ಶೀರ್ಷಿಕೆ ಇಷ್ಟವಾಗಿದ್ದು, ನಾಯಕ ಯಶ್ವಂತ್‌ಗೆ ಶುಭ ಕೋರಿದ್ದಾರೆ ಶ್ರೀಮುರಳಿ. ಈ ಚಿತ್ರದ ಹಾಡುಗಳನ್ನು ಕೇಳಿ, ಸಂಗೀತ ನಿರ್ದೇಶಕ ಚೇತನ್ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸಬರಿಗೆ ಬೆಂಬಲಿಸಿ ಎಂದು ಶ್ರೀಮುರಳಿ ಕೇಳಿಕೊಂಡಿದ್ದಾರೆ.