ಬೆಂಗಳೂರು: ನಮಗೆ ನೋಟಿಸ್ ಕೊಡದೇ ನಲಪಾಡ್ ಅಕಾಡೆಮಿ(Nalapad Academy) ಒತ್ತುವರಿ ತೆರವು ಮಾಡುತ್ತಿದ್ದಾರೆ. ಆ ಜಾಗದಲ್ಲಿ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಎನ್ನುವುದು ಗೊತ್ತಿಲ್ಲ ಎಂದು ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್(N A Haris) ಕಿಡಿಕಾರಿದರು.
ಬಿಬಿಎಂಪಿ(BBMP) ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ನೋಟಿಸ್ ಕೊಡದೆ ಬಂದಿದ್ದಾರೆ. ಕಟ್ಟಡವನ್ನು ಕೆಡಗದಿರಲು ಅಡ್ಡ ನಿಂತರೆ ಅಡ್ಡ ನಿಂತ್ವಿ ಅಂತೀರ. ನಿಂತಿಲ್ಲ ಎಂದರೂ ಪ್ರಶ್ನೆ ಮಾಡುತ್ತೀರಿ ಎಂದ ಅವರು, ಈ ದೇಶದಲ್ಲಿ ಕಾನೂನು ಇದೆ. ನೋಡೋಣ ಅವರು ಏನು ಮಾಡುತ್ತಾರೆ ಅಂತ ಅವರು ನೋಟಿಸ್ ಕೊಡಬಹುದಿತ್ತು. ಜಂಟಿ ಸರ್ವೇ ಮಾಡಬಹುದುದಿತ್ತು. ಅಲ್ಲೇನು ಪ್ರವಾಹ ಬಂದಿಲ್ಲ. ಆದರೆ ಮುಂದೆ ಬರಬಹುದು ತೆರವಿಗೆ ಮುಂದಾಗಿರಬಹುದು ಎಂದರು.
Advertisement
Advertisement
ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ. ನಮಗೆ ನೋಟಿಸ್ ಕೂಡ ಕೊಡದೇ ತೆರವು ಮಾಡ್ತಿದ್ದಾರೆ. ಕಾನೂನು ಇದೆ ದೇಶದಲ್ಲಿ. ಇದು ನನ್ನ ಪ್ರಾಪರ್ಟಿ, ಸರ್ಕಾರದ ಆಸ್ತಿ ಅಲ್ಲ. ಇಲ್ಲಿ ಪ್ರವಾಹ ಆಗಿಲ್ಲ, ಪ್ರವಾಹ ಆಗಿರೋ ಕಡೆ ತೆರವು ಮಾಡ್ತಿಲ್ಲ. ದಾಖಲೆ ಕೊಡಬೇಕಲ್ವಾ? ನಾನು ಒಬ್ಬ ಶಾಸಕ. ಅದರ ಬಗ್ಗೆ ಮಾತನಾಡಲ್ಲ. ಆದರೆ ನಾನೊಬ್ಬ ಸಾಮಾನ್ಯ ಪ್ರಜೆ ಆಗಿ ಮಾತಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
Advertisement
Advertisement
ಚಲ್ಲಘಟ್ಟದಲ್ಲಿ ರಾಜಕಾಲುವೆ ಮೇಲೆ ಶಾಸಕ ಎನ್.ಎ. ಹ್ಯಾರೀಸ್ ಮಾಲಿಕತ್ವದ ನಲ್ಪಾಡ್ ಅಕಾಡೆಮಿ ನಿರ್ಮಾಣ ಮಾಡಲಾಗಿದೆ. ಇದರ ತೆರವಿಗೆ ಇಂದು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ಆದರೆ ಆಳುವ ಮಂದಿಯ ಒತ್ತಡದ ಕಾರಣ ಹಿಡಿದ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆಗಲಿಲ್ಲ. ಮೂರ್ಮೂರು ಬಾರಿ ಅಡ್ಡಿ, ಅಡೆತಡೆ ಉಂಟಾಯಿತು. ಮೊದಲು ಹ್ಯಾರಿಸ್ ಪಿಎ ಬಂದು ಅಧಿಕಾರಿಗಳಿಗೆ ಅವಾಜ್ ಹಾಕಿದರು. ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ನಲ್ಪಾಡ್ ಬಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು. ಹೀಗಾಗಿ ಇವತ್ತು ಅರ್ಧ ತೆರವಷ್ಟೇ ಆಯಿತು. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ