ಬೆಂಗಳೂರು: ನೆಲಮಂಗಲ (Nelamangala) ಬಳಿ ವಿಮಾನ ನಿಲ್ದಾಣ ನಿರ್ಮಾಣದ ಸಲುವಾಗಿ ರೈತರ ಭೂಮಿಯನ್ನು ವಶ ಪಡಿಸಿಕೊಳ್ಳಲು ನಾನು ಬಿಡಲ್ಲ. ಅಂತಹ ಸಂದರ್ಭ ಬಂದರೆ ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ಲುತ್ತೇನೆ ಎಂದು ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ (N Srinivas) ಹೇಳಿದ್ದಾರೆ.
ನೆಲಮಂಗಲ ಬಳಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಜನತೆಗೆ ಭೂತ ಬಿಡುವ ಕೆಲಸ ಮಾಡಲ್ಲ. ಭೂತ ಬಿಡಿಸುತ್ತೇನೆ. ಯಾವುದೇ ಕಾರಣಕ್ಕೂ ರೈತರ ಭೂಮಿ ವಶಕ್ಕೆ ಬಿಡಲ್ಲ. ಅಂತಹ ಸಂದರ್ಭ ಬಂದರೆ ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ಲುತ್ತೇನೆ ಎಂದರು. ಇದನ್ನೂ ಓದಿ: 52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ
ರಾಜಕೀಯ ಉದ್ದೇಶದಿಂದ ಕೇಂದ್ರದ ತಂಡ ಬಂದು ಸರ್ವೆ ಮಾಡಿದ್ದಾರೆ. ಇಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ಮಾಡಲು ಬಿಡಲ್ಲ. ಜನತೆಗೆ ಯಾವುದೇ ಉಪಯೋಗ ಕೂಡಾ ಇಲ್ಲ. ದೇವನಹಳ್ಳಿಯಿಂದ ಇಲ್ಲಿಗೆ ಅಂತರ ಕಡಿಮೆ. 150 ಕಿ.ಮೀ ದೂರ ಇರಬೇಕು, ಇಲ್ಲದಿದ್ದರೆ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುತ್ತದೆ. ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಾಡಿದ್ರೆ ಒಳ್ಳೆಯದು. ರಾಮನಗರ, ಮೈಸೂರು, ಮಂಡ್ಯ ಚಾಮರಾಜನಗರ ಇನ್ನಿತರ ಜಿಲ್ಲೆಗಳಿಗೆ ಅನುಕೂಲ ಆಗುತ್ತದೆ. ಇಲ್ಲೇ ವಿಮಾನ ನಿಲ್ದಾಣ ಮಾಡಿದ್ರೆ, ರೈತರ ಪರವಾಗಿ ನಿಂತು ಹೋರಾಟ ಮಾಡುತ್ತೇನೆ ಹಾಗೂ ರೈತರ ಪರ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಟೈಂ ನೋಡಿ ಪಾಕ್‌ಗೆ ಹೊಡೆಯಿರಿ- ಸೇನೆಗೆ ಪರಮಾಧಿಕಾರ ಕೊಟ್ಟ ಮೋದಿ
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೋಟಗಾನಹಳ್ಳಿ, ಲಕ್ಕೇನಹಳ್ಳಿ ಹಾಗೂ ಗುಡೇಮಾರನಹಳ್ಳಿ ಗ್ರಾಮದ ಜನರು ಪ್ರತಿಭಟನೆ ಮಾಡಿದರು.
ರೈತರು ಕೆಂಪೇಗೌಡ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದು, ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಬಳಿಕ ನೆಲಮಂಗಲ ಶಾಸಕ ಶ್ರೀನಿವಾಸ್, ಸ್ಥಳೀಯ ಸ್ವಾಮೀಜಿ ಹಾಗೂ ರೈತ ಮುಖಂಡರು ಸಾರ್ವಜನಿಕ ಸಭೆ ನಡೆಸಿದರು. ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದು, ಜೀವಕೊಟ್ಟರೂ ಭೂಮಿ ಕೊಡೆವು ಎಂದು ರೈತರು ತೀರ್ಮಾಸಿದರು. ಇದನ್ನೂ ಓದಿ: ಹಿಂದೂಗಳ ನರಮೇಧದಲ್ಲೂ ಪೋಸ್ಟರ್ ವಾರ್; ಕಾಂಗ್ರೆಸ್‌ನಿಂದ ಮೋದಿ ʻಗಾಯಬ್ʼ ಗೇಲಿ – ನೀವು ಪಾಕ್ ಏಜೆಂಟ್‌ಗಳು ಅಂತ ಬಿಜೆಪಿ ತಿರುಗೇಟು
ಕೇಂದ್ರ ವಿಮಾನಯಾನ ಪ್ರಾಧಿಕಾರ ಅಧಿಕಾರಿಗಳು ಸರ್ವೆ ನಡೆಸಿದ ನಂತರ 6000 ಸಾವಿರ ಎಕ್ರೆ ಪ್ರದೇಶದ 15ಕ್ಕೂ ಹೆಚ್ಚು ಹಳ್ಳಿಗಳ ಸ್ಥಳಾಂತರ ಬಗ್ಗೆ ರೈತರಲ್ಲಿ ಭೀತಿ ಉಂಟಾಗಿದೆ. ಬಾಳಿ ಬೆಳೆದ ಊರುಗಳನ್ನು ಬಿಡಲು ಒಪ್ಪದ ರೈತರು ಬೃಹತ್ ಪ್ರತಿಭಟನೆ ಮುಂದಾಗಿದ್ದಾರೆ.