ಚಾಮರಾಜನಗರ: ಪಾದಯಾತ್ರೆಯಿಂದ ಕೊರೊನಾ ಉಲ್ಬಣವಾದರೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ಶಾಸಕ ಎನ್ ಮಹೇಶ್ ಹೇಳಿದರು.
ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಯವರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ದಯಮಾಡಿ ಪಾದಯಾತ್ರೆ ನಿಲ್ಲಿಸಿ. ಬೆಂಗಳೂರಿನಲ್ಲಿ ಈಗಾಗಲೇ 12 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ. ನಿಮ್ಮ ಹಾಗೂ ಜೊತೆ ಬಂದವರ ಆರೋಗ್ಯದಲ್ಲಿ ಏರುಪೇರಾದರೆ ಯಾರೂ ಹೊಣೆ? ಪಾದಯಾತ್ರೆ ನಿಲ್ಲಿಸಿ ರಾಜ್ಯ ಸರ್ಕಾರದ ಜೊತೆಗೆ ಮಾತನಾಡಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡೂ ಕೂಡಿಕೊಂಡು ಹೋರಾಟ ಮಾಡಬೇಕಿದೆ ಎಂದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್
ಪಾದಯಾತ್ರೆ ವೇಳೆ ಕೆಲವು ಶಾಸಕರು ನೀರಾವರಿಗೂ ನೀರು ಬಳಸಿಕೊಳ್ಳಬಹುದೆಂದು ಹೇಳುತ್ತಿದ್ದಾರೆ. ಆದರೆ ಕುಡಿಯಲು ಮತ್ತು ವಿದ್ಯುತ್ ಉತ್ಪಾದನೆ ಗಷ್ಟೇ ಬಳಸಲು ಅವಕಾಶವಿದೆಯಷ್ಟೇ. ಈ ರೀತಿ ಹೇಳಿಕೆಯಿಂದ ಕಾವೇರಿ ನ್ಯಾಯಾಧೀಕರಣ ಏನು ತೀರ್ಮಾನ ಕೈಗೊಳ್ಳುತ್ತೆ. ಸುಪ್ರೀಂ ಕೋರ್ಟ್‍ನಲ್ಲಿ ಒಂದು ಅರ್ಜಿಯನ್ನು ವಜಾಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ರೀತಿಯ ಹೇಳಿಕೆಯಿಂದ ಸಮಸ್ಯೆಯಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ