ಚಾಮರಾಜನಗರ: ಕೊತ್ತೂರು ಮಂಜುನಾಥ್ ಒಬ್ಬ ಅಬ್‌ನಾರ್ಮಲ್ ಪರ್ಸನ್ ಅಂತ ಅನಿಸುತ್ತೆ ಎಂದು ಬಿಜೆಪಿ ನಾಯಕ ಎನ್.ಮಹೇಶ್ ಗುಡುಗಿದರು.
ಮಂಜುನಾಥ್‌ಗೆ ತಲೆ ನೆಟ್ಟಗಿಲ್ಲ. ಒಂದು ಬಾರಿ ನಿಮ್ಹಾನ್ಸ್ಗೆ ಹೋಗಿ ತಲೆ ರಿಪೇರಿ ಮಾಡಿಸಿಕೊಂಡು ಬರ್ಬೇಕು. ಇದು ದೇಶದ ಸಂಕಷ್ಟ ಸಂದರ್ಭ. 147 ಕೋಟಿ ಜನರು ಪಕ್ಷಬೇಧ, ಜಾತಿಬೇಧ, ಧರ್ಮಬೇಧ ಮರೆತು ಸೈನಿಕರ ಜೊತೆ ನಿಲ್ಲಬೇಕು, ಆತ್ಮ ವಿಶ್ವಾಸ ತುಂಬಬೇಕು ಎಂದು ತಿಳಿಸಿದರು.
ಓರ್ವ ಶಾಸಕನಾಗಿದ್ದು, ಆ ಸ್ಥಾನಕ್ಕೆ ಅವಮಾನವಿದು. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡ್ತೀನಿ. ಕೊತ್ತೂರು ಮಂಜುನಾಥ್‌ನ ಅಮಾನತು ಮಾಡ್ಬೇಕು. ಆತ ಓರ್ವ ಲೂಸ್.. ಲೂಸ್ ಟಾಕ್ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸಚಿವರೊಬ್ಬರು ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗ್ಲೆ ನಾವು ಅವರನ್ನು ಅಮಾನತು ಮಾಡಿದ್ದೇವೆ. ನಾವು ಅವರ ಮಾತನ್ನ ಖಂಡಿಸಿದ್ದೇವೆ. ದೇಶದ ಸೈನಿಕರ ವಿರುದ್ಧ ಯಾರೇ ಮಾತನಾಡಿದ್ರು ನಾನು ಅದನ್ನ ಖಂಡಿಸುತ್ತೇನೆ ಎಂದರು.