ಭೋಪಾಲ್: ವಿಧವೆಯನ್ನು ಮದುವೆಯಾಗಿ ಅವರಿಗೆ ಬಾಳು ಕೊಟ್ಟರೆ, ಅಂತಹವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ.
ವಿಧವೆಯರ ಬಾಳನ್ನು ಬಂಗಾರಗೊಳಿಸಲು ಇದು ದೇಶದಾದ್ಯಂತದ ಮೊದಲ ಪ್ರಯತ್ನವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸಮಾಜ ಕಲ್ಯಾಣ ಸಚಿವಾಲಯ ಹಣಕಾಸು ಇಲಾಖೆಗೆ ಅನುಮತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ.
Advertisement
ಮಧ್ಯಪ್ರದೇಶ ಸರ್ಕಾರ ಈ ಯೋಜನೆ ಆರಂಭಿಸಲು 20 ಕೋಟಿ ರೂ. ಹಣವನ್ನು ಪ್ರತಿವರ್ಷ ಮೀಸಲಿಡಲು ಮುಂದಾಗಿದ್ದು, ಒಂದು ವರ್ಷದಲ್ಲಿ 1 ಸಾವಿರ ವಿವಾಹಗಳು ನಡೆಯಬಹುದು ಎಂದು ಅಂದಾಜಿಸಿದೆ.
Advertisement
ಸುಪ್ರೀಂ ಕೋರ್ಟ್ ಕಳೆದ ಜುಲೈನಲ್ಲಿ ಸರ್ಕಾರಕ್ಕೆ ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹ ನೀಡುವಂತಹ ಯೋಜನೆಯನ್ನು ಜಾರಿ ಮಾಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ಸುಪ್ರೀಂ ಕೇಳಿದ ಪ್ರಶ್ನೆಯಿಂದ ಪ್ರೇರಣೆಯಾಗಿ ಮಧ್ಯಪ್ರದೇಶ ಸರ್ಕಾರ ಈಗ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
Advertisement
1856 ರಲ್ಲಿ ವಿಧವಾ ವಿವಾಹವನ್ನು ಕಾನೂನು ಬದ್ಧಗೊಳಿಸಲಾಗಿತ್ತು. ಮುಂದಿನ ಮೂರು ತಿಂಗಳ ಒಳಗಡೆ ಈ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
ಷರತ್ತುಗಳು:
1. ವಿಧವೆಯನ್ನು ಮದುವೆಯಾಗುವ ವ್ಯಕ್ತಿಗೆ ಇದು ಮೊದಲನೇ ವಿವಾಹವಾಗಿರಬೇಕು.
2. 18-45 ವರ್ಷದೊಳಗಿನ ವಿಧವೆಯರನ್ನು ಮಾತ್ರ ಮದುವೆಯಾಗಬೇಕು.
3. ಮದುವೆಯಾದ ದಂಪತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಮದುವೆಯನ್ನು ನೋಂದಣಿ ಮಾಡಬೇಕು.
4. ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಗ್ರಾಮಸ್ಥರು ನೀಡುವ ದಾಖಲೆಗಳು ತೋರಿಸುವಂತಿಲ್ಲ.