ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು (ಶನಿವಾರ) ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎನ್.ಎಮ್.ಸುರೇಶ್, ಮಾರ್ಸ್ ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಆಯ್ಕೆ ಬಯಸಿದ್ದರು. ಕೊನೆಗೂ ಅಧ್ಯಕ್ಷ ಸ್ಥಾನದ ಗೆಲುವು ಎನ್.ಎಮ್. ಸುರೇಶ್ ಅವರ ಪಾಲಾಗಿದೆ.
Advertisement
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದ ಶಿಲ್ಪಾ ಶ್ರೀನಿವಾಸ್ 217 ಮತಗಳು, ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತಗಳು, ಎನ್.ಎಮ್. ಸುರೇಶ್ 337 ಹಾಗೂ ಎ.ಗಣೇಶ್ 204 ಮತಗಳನ್ನು ಪಡೆದಿದ್ದಾರೆ. ಅಂತಿಮವಾಗಿ ಎನ್.ಎಮ್. ಸುರೇಶ್ 120 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಇದನ್ನೂ ಓದಿ: ಕಾವೇರಿಗಾಗಿ ಜೀವ ಕೊಡಲು ಸಿದ್ಧ: ನಟ ರಾಘವೇಂದ್ರ ರಾಜ್ ಕುಮಾರ್
Advertisement
Advertisement
ಎನ್.ಎಮ್. ಸುರೇಶ್ ನೂತನ ಫಿಲಂ ಚೇಂಬರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ, ಕಾರ್ಯದರ್ಶಿಯಾಗಿ ಭಾ.ಮಾ. ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದಾರೆ.
Advertisement
ಬೆಳಗ್ಗೆ 65ನೇ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಚುನಾವಣೆ ಮತ್ತು ಈವರೆಗೂ ವಾಣಿಜ್ಯ ಮಂಡಳಿ ನಡೆದುಕೊಂಡು ಬಂದ ಹಾದಿಯ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ಮಾಡಲಾಯಿತು. ಒಟ್ಟು ಮತಗಳು ಸಂಖ್ಯೆ 1,599. ಚಲಾವಣೆ ಆದ ಮತಗಳು ಸಂಖ್ಯೆ 967 ಆಗಿದ್ದವು. ಇದನ್ನೂ ಓದಿ: ತೆಲುಗು ಸಿನಿಮಾ ಒಪ್ಪಿಕೊಂಡ ಬಾಲಿವುಡ್ ನಟಿ ಐಶ್ವರ್ಯ ರೈ
Web Stories