ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

Public TV
2 Min Read
Chaluvaraya Swamy

ಬೆಂಗಳೂರು: ನಮಗೆ ಒಟ್ಟು 6 ಲಕ್ಷದ 88 ಸಾವಿರ ಟನ್ ರಸಗೊಬ್ಬರ (Fertiliser) ಸಪ್ಲೈ ಆಗಬೇಕಿತ್ತು. ಅದರಲ್ಲಿ 5 ಪಕ್ಷದ 27 ಸಾವಿರ ಟನ್ ಸಪ್ಲೈ ಆಗಿದೆ. ಉಳಿದ 1 ಲಕ್ಷದ 50 ಸಾವಿರ ಟನ್ ಬರಬೇಕಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ಹೇಳಿದರು.

ಕಳೆದ ಒಂದೂವರೆ ತಿಂಗಳಿಂದ ಮಳೆ ಚೆನ್ನಾಗಿ ಆಗ್ತಿದೆ ಮುಂಗಾರು ಬೇಗ ಆರಂಭವಾಗಿದೆ ಡ್ಯಾಮ್‌ಗಳು ಬೇಗ ತುಂಬಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಜೊತೆಗೆ 2 ಲಕ್ಷ ಹೆಕ್ಟೇರ್ ಜಾಸ್ತಿ ಬೇಸಾಯದ ಏರಿಯಾ ಜಾಸ್ತಿ ಆಗಿದೆ. ಈ ಕಾರಣಗಳಿಂದ ರಸಗೊಬ್ಬರಕ್ಕೆ (Fertiliser) ಬೇಡಿಕೆ ಹೆಚ್ಚಾಗಿದೆ. ಟೀಕೆ ಟಿಪ್ಪಣಿಗಿಂತ ಹೆಚ್ಚಾಗಿ ರೈತರ ಸಮಸ್ಯೆ ಬಗೆಹರಿಸಬೇಕು ಅಂತ ಮುಖ್ಯಮಂತ್ರಿಗಳಿಗೆ ನಾನೇ ಮನವಿ ಮಾಡಿದೆ ಪತ್ರ ಬರೆಯಿರಿ ಅಂತ ಹೇಳಿದೆ. ಆದರೆ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಜೋಶಿಯವರು ಮಾತನಾಡುತ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದ್ರು.

Farmers

ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ
ನಾನೇ ಜೋಶಿಯವರಿಗೆ (Pralhad Joshi) ಪತ್ರ ಬರೆದಿದ್ದೇನೆ. ರಾಜ್ಯದ ಎಲ್ಲಾ ಸಂಸದರಿಗೂ ಹಾಗೂ ರಾಜ್ಯ ಪ್ರತಿನಿಧಿಸುವ ಸಚಿವರಿಗೆ ಪತ್ರ ಬರೆದಿದ್ದೇನೆ. ಆದ್ರೆ ಅದರ ಕಡೆ ಗಮನ ಹರಿಸದೇ ಸಿದ್ದರಾಮಯ್ಯರ ಬಗ್ಗೆ ಟೀಕೆ ಮಾಡಿದ್ದಾರೆ. ಜೋಶಿಯವರು ಕೃಷಿ ವಿಚಾರದಲ್ಲಿ ಹೀಗೆಲ್ಲಾ ರಾಜಕಾರಣ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ರಸಗೊಬ್ಬರವನ್ನ ಟೈಮ್ ಟು ಟೈಮ್ ಕೊಡ್ತಾರೆ. ನಾವು ಕಳೆದ ಬಾರಿ ಹೆಚ್ಚು ದಾಸ್ತಾನು ಮಡಿಕೊಳ್ಳುತ್ತಿದ್ದೆವು. ಆದರೆ ಕೇಂದ್ರ ಸರ್ಕಾರದಲ್ಲಿ 2-3 ಪ್ರಾಬ್ಲಂ ಇದೆ. ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ, ಚೀನಾದಿಂದ ಸಂಪೂರ್ಣ ಸ್ಥಗಿತವಾಗಿದೆ. ರಾಷ್ಟ ಮಟ್ಟದಲ್ಲಿ ಉತ್ಪಾದನೆ ಕಡಿಮೆ ಆಗಿದೆ. ಇದೆಲ್ಲ ಕೇಂದ್ರ ಸರ್ಕಾರದವರೆ ಕೊಡಬೇಕು ಅಂತ ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

ನಾವು ಟೀಕೆ ಟಿಪ್ಪಣಿಗೆ ಹೋಗಲಿಲ್ಲ. ಹಳೇ ಬ್ಯಾಲೆನ್ಸ್ ಸೇರಿ ತಗೆದುಕೊಂಡು ರೈತರಿಗೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರಿಗೆ ನ್ಯಾನೋ ಯೂರಿಯಾ ಬಳಸಲು ಸಹಾ ಹೇಳಿದ್ದೇವೆ. ಅವರು ಸಹ ಹೋಗಿ ನಡ್ಡಾ ಅವರ ಜೊತೆ ಕುಳಿತು ಎಷ್ಟು ಸಾಧ್ಯವೋ ಅಷ್ಟು ಬೇಗ ಸಪ್ಲೈ ಕೊಡಿ ಅಂತ ಹೇಳೋದು ಬಿಟ್ಟು ಟೀಕೆ ಟಿಪ್ಪಣಿ ಮಾಡಿದರೆ ಹೇಗೆ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್

ನನಗೂ ರಾಜಕೀಯವಾಗಿ 35 ವರ್ಷ ಆಗಿದೆ. ನಾನು ಟೀಕೆ ಮಾಡಬಹುದು, ಆದ್ರೆ ನನ್ನದು ರೈತರ ಇಲಾಖೆ ಟೀಕೆ ಮುಖ್ಯ ಅಲ್ಲ ರೈತರ ಸಮಸ್ಯೆ ಬಗೆಹರಿಸಬೇಕು. ರೈತರು ಆತಂಕ ಪಡಬೇಕಿಲ್ಲ. ಯಾವ್ಯಾವಾಗ ಏನು ಬೇಕೋ ಅದನ್ನ ತಲುಪಿಸುತ್ತೇವೆ. ಎಲ್ಲರೂ ಸಮಾಧಾನದಿಂದ ಇರಿ, 2 ದಿನ ಬರುವುದು ತಡವಾದ್ರೆ 3ನೇ ದಿನ 4ನೇ ದಿನ ತರಿಸಿಕೊಡ್ತೇವೆ. ಜೊತೆಗೆ ನ್ಯಾನೋ ಯೂರಿಯಾ ಸಹ ಇಳುವರಿಗೆ ಒಳ್ಳೆಯದು ರೈತರು ಯಾವುದೆ ಘರ್ಷಣೆ ಮಾಡಿಕೊಳ್ಳುವುದು ಬೇಡ ಅಂತ ಸಲಹೆ ನೀಡಿದರು. ಇದನ್ನೂ ಓದಿ: ನಾವು ಬಿಜೆಪಿಯವರಿಗಿಂತ ಜಾಸ್ತಿ ಕೆಲಸ ಮಾಡಿದ್ದೇವೆ – ಪುತ್ರನ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

Share This Article