ನವದೆಹಲಿ: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕೋಲಾಹಲ ಎಬ್ಬಿಸಿದ ಲೋಕಸಭಾ ಭದ್ರತಾ ಲೋಪ (Parliament Security Breach) ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಸ್ಮೋಕ್ ಬಾಂಬ್ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಮೈಸೂರಿಗ ಮನೋರಂಜನ್ (Manoranjan) ಎಂಬ ಅಚ್ಚರಿದಾಯಕ ಅಂಶವನ್ನು ದೆಹಲಿ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ವರ್ಷದ ಹಿಂದೆಯೇ ಈ ಮಾಸ್ಟರ್ ಪ್ಲಾನ್ ನಡೆದಿತ್ತು. ಸರ್ಕಾರದ ವಿರುದ್ಧ ಏನಾದರು ದೊಡ್ಡದು ಮಾಡ್ಬೇಕು. ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್
ಬಂಧನಕ್ಕೆ ಒಳಗಾಗಿರುವ 6 ಜನಕ್ಕೂ ಟಿಕೆಟ್ ಬುಕ್ ಮಾಡಿಸಿ ಮೈಸೂರಿಗೆ ಕರೆಸಿಕೊಂಡಿದ್ದ. ವಾಟ್ಸಾಪ್‌ನ ಮೂಲಕ ಟಿಕೆಟ್ ಕೊಡಿಸಿ ಮೈಸೂರಿಗೆ ಕರೆಸಿದ್ದ. ಮೈಸೂರಿನಲ್ಲಿ ಎಲ್ಲದರ ಪ್ಲಾನ್ ನಡೆದಿತ್ತು. ಈ ಮೂಲಕ ಇಡೀ ಕೇಸ್‌ನ ಮಾಸ್ಟರ್ ಮೈಂಡ್ ಮನೋರಂಜನ್ ಆಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಮನೋರಂಜನ್ ಎಲ್ಲರ ಮೈಂಡ್ ವಾಷ್ ಮಾಡಿದ್ದ. ಸಾಗರ್‌ಗೆ ಅತಿ ಹೆಚ್ಚಾಗಿ ಮೈಂಡ್ ವಾಷ್ ಮಾಡಿದ್ದು, ತನಿಖೆಯಲ್ಲಿ ಬಹಿರಂಗವಾಗಿದೆ. ನಿರುದ್ಯೋಗಿ ಆಗಿದ್ದರೂ ಕಾಂಬೋಡಿಯಾಗೆ ಹೇಗೆ ಹೋದಾ? ಕಾಂಬೋಡಿಯಾಗೆ ಕರೆಸಿಕೊಂಡಿದ್ದು ಯಾರು ಎಂಬ ಪ್ರಶ್ನೆಗಳು ಪೊಲೀಸಲ್ಲಿ ಉದ್ಭವಿಸಿದ್ದು, ಈ ಬಗ್ಗೆ ತನಿಖೆಯ ಜಾಡು ಹಿಡಿದಿದ್ದಾರೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ ತನಿಖೆ ಆದ್ರೆ ಟೀಕೆ ಮಾಡ್ತಿರೋರೆ ಸಿಕ್ಕಿ ಬೀಳ್ತಾರೆ: ಯತ್ನಾಳ್
ದೆಹಲಿ ಪೊಲೀಸರು ತನಿಖೆಯಲ್ಲಿ ಮಹತ್ವದ ಅಂಶಗಳು ಪತ್ತೆಯಾಗಿವೆ. ಮನೋರಂಜನ್ ಆಣತಿಯಂತೆ ಕೆಲಸ ನಡೆಸಿದ್ದಾರೆ ಎನ್ನುವುದು ಗೊತ್ತಾಗಿದೆ. ಈತನಿಗೆ ಹಣಕಾಸು ನೀಡುತ್ತಾ ಇದ್ದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ದಾಳಿ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದ ಲಲಿತ್ ಝಾ, ಕೃತ್ಯದ ನಂತರ ಸಾಕ್ಷ್ಯವನ್ನು ನಾಶ ಮಾಡುವ ಕಾರ್ಯವನ್ನು ಮಾತ್ರ ವಹಿಸಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮೈಸೂರಿಗನೇ ಆದ ಮನೋರಂಜನ್ ಈ ದಾಳಿಯ ಮಾಸ್ಟರ್ ಮೈಂಡ್ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ