ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಐತಿಹಾಸಿಕ ದಸರಾ (Dasara) ಮಹೋತ್ಸವದ ಸಂಭ್ರಮ ಕಳೆಕಟ್ಟಿದೆ. 414ನೇ ದಸರಾಗೆ ವಿದ್ಯುಕ್ತ ಚಾಲನೆ ದೊರಕಿದೆ. ಶುಭ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ (Hamsalekha) ಅವರು ಮೈಸೂರು ದಸರಾವನ್ನು ಉದ್ಘಾಟಿಸಿದ್ದಾರೆ.
ನಾಡದೇವಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ದಸರಾ ಹಬ್ಬವನ್ನು ಉದ್ಘಾಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಡಾ. ಹಂಸಲೇಖ ಅವರ ಪತ್ನಿ ಕೂಡಾ ಪುಷ್ಪಾರ್ಚನೆ ವೇಳೆ ಭಾಗಿಯಾಗಿದ್ದರು.
Advertisement
Advertisement
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಕರ್ನಾಟಕದ ಏಕೀಕರಣಕ್ಕೆ 50 ವರ್ಷ. ನನ್ನ ಕಲಾ ಕಾಯಕಕ್ಕೂ 50 ವರ್ಷ. ಇಂದು ನಾಡಹಬ್ಬ ದಸರಾಗೆ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಬಹಳ ಬಹಳ ಬೆಲೆಯುಳ್ಳದ್ದು. ಈ ಅವಕಾಶಕ್ಕಾಗಿ ನಾನು ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಹಲವರು ಕಾರಣರಿದ್ದಾರೆ. ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮ, ಗುರುವನ್ನೆ, ಸಂಗೀತವನ್ನೆ, ಕನ್ನಡಿಗರನ್ನೆ ಸಂವಿಧಾನವನ್ನೆ, ಸಿಂಗಲ್ ಸಿಂಹ ಸಿದ್ದರಾಮಯ್ಯ, ಪ್ರಬಲ ಶಕ್ತಿ ಸಂಘಟಕ ಡಿಕೆ ಶಿವಕುಮಾರ್, ಹೆಂಡತಿ, ಮಕ್ಕಳನ್ನೆ, ಭೀಮ ಪಡೆಯನ್ನೆ ಯಾರು ಯಾರನ್ನು ನೆನೆಯಲಿ ಹೇಳಿ? ಭೂಮಿ ತಾಯಿಯ ನೆನೆದು ಬಿಟ್ಟರೆ ಇವರನ್ನೆಲ್ಲಾ ನೆನೆದಂತೆ ಎಂದು ನುಡಿದರು.
Advertisement
ನಾನು ಈಗ ಕನ್ನಡದ ದೀಪ ಹಚ್ಚಿದ್ದೇನೆ. ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದರು.
Advertisement
ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ? ನಮಗೆ ದೆಹಲಿ ಬೇಕು. ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು. ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು. ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ? ಯಾರಿಗೆ ಅರ್ಥವಾಗಲ್ಲ? ಈ ಬಗ್ಗೆ ಒಂದು ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಸಂಸ್ಥೆಯೇ ಈ ಸಮೀಕ್ಷೆ ಮಾಡುತ್ತದೆ. ಇದಕ್ಕೆ ಜನರ ಸಹಕಾರ ಇರಲಿ ಎಂದು ಆಶಿಸಿದರು. ಇದನ್ನೂ ಓದಿ: ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ
ಪ್ರತಿಭೆ ಮತ್ತು ಉದ್ಯಮ ಅಗತ್ಯವಾದುದು. ಹುಬ್ಬಳ್ಳಿ-ಬೆಳಗಾವಿ ಜೋಡಿ ಆಗಬೇಕು. ಮಂಗಳೂರು-ಮೈಸೂರು ಜೋಡಿ ಆಗಬೇಕು. ಈ 2 ಜಿಲ್ಲೆಗಳಲ್ಲಿ ವ್ಯಾಪಾರ ಇದೆ. ಸಂಪ್ರದಾಯಿಕ ವೈಭೋಗವಿದೆ. ನಮ್ಮ ಜಿಲ್ಲೆಗಳು ನಮ್ಮ ಜಿಲ್ಲೆಗಳ ನಡುವೆಯೆ ಜೋಡಿ ಆಗಬೇಕು. 29 ಜಿಲ್ಲೆಗಳನ್ನು ಎರಡೆರಡು ಜಿಲ್ಲೆಗಳಗಿ ಜೋಡಿಸಿ ವ್ಯಾಪಾರ, ಅಭಿವೃದ್ಧಿಗೆ ಯೋಜನೆ ಮಾಡಬೇಕು. ಕೃಷಿಕ-ಕಾರ್ಪೋರೆಟ್ ಜೋಡಿ ಆಗಬೇಕು. ಅವರ ಕಷ್ಟ ಇವರಿಗೆ ಇವರ ಕಷ್ಟ ಅವರಿಗೆ ಗೊತ್ತಾಗಬೇಕು. ಕನ್ನಡದ ಪಟ್ಟದ ಕೆಲಸಕ್ಕೆ ನಾನು ನನ್ನ ಎಲ್ಲಾ ಸಮಯ ಕೊಡುತ್ತೇನೆ. ಇದರಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತೇನೆ ಎಂದು ಹೇಳಿದರು.
ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣ, ರಾಷ್ಟ್ರದ ಜೊತೆ, ವಿಶ್ವದ ಜೊತೆ ಕನ್ನಡವನ್ನು ಸಮೀಕರಿಸಬೇಕು. ನಾವು ಕನ್ನಡದ ಅಭಿವೃದ್ಧಿ ಮಾಡೋಣಾ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದರು. ಇದನ್ನೂ ಓದಿ: ನವರಾತ್ರಿ 2023: ಶೈಲಪುತ್ರಿಯ ಮಹತ್ವವೇನು?
Web Stories