ಮೈಸೂರು: ಜೆಡಿಎಸ್ ಅವರು ನಂಬಿಸಿ ಕತ್ತು ಕೊಯ್ದು, ಕೊಟ್ಟ ಮಾತು ತಪ್ಪಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಚುನಾವಣೆ ಪ್ರಕ್ರಿಯೆಯಿಂದ ಹೊರಬಂದ ಬಿಜೆಪಿ ಸದಸ್ಯರು ಜೆಡಿಎಸ್‍ಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕುವವರು ದೇವೇಗೌಡರು. ರಾತ್ರಿ 10.30ರ ವರೆಗೆ ನಿಮ್ಮ ಜೊತೆಗೆ ಇರುತ್ತೇವೆ ಎಂದು ಹೇಳಿದ್ದರು. ಆದ್ರೆ ಇದೀಗ ಏಕಾಏಕಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ಜೆಡಿಎಸ್ ಅವರು ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಗಾದ್ರೂ ಜೆಡಿಎಸ್ ನವರು ಹೋಗುತ್ತಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಅವರು ಈ ರೀತಿ ಮಾಡುತ್ತಾರೆ ಎಂದಿದ್ದರೆ ನಾವು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಜಿ.ಪಂ ಬಿಜೆಪಿ ಸದಸ್ಯ ನಟರಾಜು ಕಿಡಿಕಾರಿದ್ದಾರೆ.
Advertisement
Advertisement
ಜೆಡಿಎಸ್ ಅವರು ನಂಬಿಸಿ ಕತ್ತು ಕೊಯ್ದಿದ್ದಾರೆ. ಆದರಿಂದ ನಾವು ಚುನಾವಣೆ ಪ್ರಕ್ರಿಯೆಯಿಂದ ದೂರ ಸರಿದಿದ್ದೇವೆ. ನಾವು ನಾಮಪತ್ರವನ್ನ ವಾಪಸ್ ತೆಗೆದುಕೊಂಡಿದ್ದೇವೆ. ಜೆಡಿಎಸ್ ಅವರು ಸಮಯ ಸಾಧಕರು. ಸಮಯ ಬಂದಾಗ ಕಾಂಗ್ರೆಸ್ ಜೊತೆಗೂ ಹೋಗ್ತಾರೆ. ಬಿಜೆಪಿ ಜೊತೆಗೂ ಸೇರುತ್ತಾರೆ. ಬಿಎಸ್‍ಪಿ ಜೊತೆಗೂ ಕೈಜೊಡಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಸದ್ಯಸರು ಆರೋಪಿಸಿ ಜಿಲ್ಲಾ ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv