– ಸರ್ಕಾರಿ ಯೋಜನೆಗಳ ಸವಲತ್ತು ಕೊಡಿಸೋದಾಗಿ ನಂಬಿಸಿ ದೋಖಾ
ಮೈಸೂರು: ಸಚಿವ ಹೆಚ್.ಸಿ ಮಹದೇವಪ್ಪ (HC Mahadevappa) ಅವರ ಹೆಸರಿನಲ್ಲಿ ಖತರ್ನಾಕ್ ಮಹಿಳೆಯೊಬ್ಬಳು 27 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಟಿ. ನರಸೀಪುರ (T Narasipura) ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.
ಇದೇ ಗ್ರಾಮದ ಜ್ಯೋತಿ ಎಂಬ ಮಹಿಳೆ, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಮಹಿಳೆಯರು ಮತ್ತು ಯುವಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾಳೆ (Fraud). ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು – ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನ ಹತ್ಯೆ
ಬರೋಬ್ಬರಿ 27 ಲಕ್ಷ ರೂ. ವರೆಗೆ ಹಣ ವಂಚನೆ ಮಾಡಿದ್ದಾಳೆ. ವಂಚನೆಗೊಳಗಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ನ್ಯಾಯ ಕೊಡಿಸುವಂತೆ ಪೋಲೀಸರಿಗೆ ಮೊರೆ ಇಟ್ಟಿದ್ದಾರೆ. ಪೊಲೀಸರು ತನಿಖೆಗೆ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮುಂದಿನ ವಾರದಿಂದ ಟ್ರ‍್ಯಾಕಿಗಿಳಿಯಲಿದೆ ನಾಲ್ಕನೇ ರೈಲು