– ಗಲಾಟೆ ದಿನ ಪೊಲೀಸರ ಜೀವ ಉಳಿದಿದ್ದೇ ಪವಾಡ
ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಬಳಿ ದಾಂಧಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಗಲಾಟೆ ದಿನದ ಭಯಾನಕ ದೃಶ್ಯದ ವೀಡಿಯೋ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ.
ಒಂದು ಕ್ಷಣ ಪೊಲೀಸರು ಎಚ್ಚರ ತಪ್ಪಿದ್ದರೂ ಅಲ್ಲಿ ಬೇರೆಯದ್ದೇ ಕಥೆಯಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತಿದೆ ಭಯಾನಕ ವೀಡಿಯೋ. ಒಂದೇ ಕ್ಷಣದಲ್ಲಿ ಸಾವಿರ ಸಂಖ್ಯೆಯಲ್ಲಿ ಪುಂಡರು ಠಾಣೆ ಮುಂದೆ ತುಂಬಿಕೊಂಡಿರುವ ದೃಶ್ಯ ವೀಡಿಯೋದಲ್ಲಿದೆ. ಇದನ್ನೂ ಓದಿ: ಮೈಸೂರು ಉದಯಗಿರಿ ಗಲಭೆ ಕೇಸ್ – ಘಟನೆಯಲ್ಲಿ ಭಾಗಿಯಾದವರನ್ನ ಮುಲಾಜಿಲ್ಲದೇ ಬಂಧಿಸಿ: ಸಿಎಂ ಸೂಚನೆ
ವೀಡಿಯೋದಲ್ಲಿ ಪುಂಡರ ಗುಂಪನ್ನು ಡಿಸಿಪಿ ಮುತ್ತುರಾಜು ಸಮಾಧಾನ ಮಾಡಲು ಯತ್ನಿಸಿ ವಿಫಲರಾಗಿರುವುದು ಕಂಡುಬಂದಿದೆ. ಪೊಲೀಸ್ ಜೀಪ್ ಹತ್ತಿ, ಪರಿ ಪರಿಯಾಗಿ ಕೇಳಿಕೊಂಡರೂ ಪುಂಡರ ಗುಂಪು ಸುಮ್ಮನಾಗಿಲ್ಲ. ಸಾವಿರಾರು ಪುಂಡರ ಗುಂಪಿನಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಮಾತ್ರ ನಿಂತು ಕೆಲಸ ಮಾಡುತ್ತಿರುವ ವೀಡಿಯೋದಲ್ಲಿ ಸೆರೆಯಾಗಿದೆ.
ಪೊಲೀಸರು ಸ್ವಲ್ಪ ಯಾಮಾರಿದ್ದರೂ ಮೈಸೂರಲ್ಲಿ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ಮರುಕಳುಸುವ ಸಾಧ್ಯತೆ ಹೆಚ್ಚಿತ್ತು. ಗಲಾಟೆ ದಿನ ಪೊಲೀಸರ ಜೀವ ಉಳಿದಿದ್ದೇ ಪವಾಡ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.
ಸಾವಿರಕ್ಕಿಂತ ಅಧಿಕ ಮಂದಿ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಲು ಯತ್ನಿಸಿದ್ದರು. ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್ ಕ್ರಮ ಆಗುತ್ತಾ? – ಪರಮೇಶ್ವರ್ ಹೇಳಿದ್ದೇನು?