ಮೈಸೂರು: ನಗರದಲ್ಲಿ ನೂತನವಾಗಿ ಆರಂಭವಾಗಿರುವ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಯೋಜನೆಯ ಅಧಿಕೃತ ಚಂದಾದಾರರಾಗಿ 10 ಸಾವಿರ ಮಂದಿ ನೊಂದಣಿಯಾಗಿದ್ದು, ಟ್ರಿಣ್ ಟ್ರಿಣ್ ಯೋಜನೆ ದಿನೇ ದಿನೇ ಮತ್ತಷ್ಟು ಜನಪ್ರಿಯವಾಗುತ್ತಿದೆ. ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆದಾರರ ಸಂಖ್ಯೆ 10 ಸಾವಿರ ಗಡಿ ದಾಟಿರುವುದು ಯೋಜನೆಯ ಸಫಲತೆಗೆ ಸಾಕ್ಷಿಯಾಗಿದೆ.
2017 ಜೂನ್ 4ರಂದು ಈ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಚಾಲನೆಗೊಂಡಿತ್ತು. ಕಳೆದ ಶುಕ್ರವಾರದ ವೇಳೆಗೆ ಒಟ್ಟು 10 ಸಾವಿರ ಸದಸ್ಯರು ನೋಂದಣಿಯಾಗಿದ್ದರೆ. ತಿಂಗಳಿಗೆ ಸರಾಸರಿ 300 ರಿಂದ 500 ಮಂದಿ ನೋಂದಣಿಯಾಗಿದ್ದು, ಪ್ರತಿನಿತ್ಯ ಸರಾಸರಿ 800 ರಿಂದ 1000 ಮಂದಿಯಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.
ಮೈಸೂರು ನಗರದಾದ್ಯಂತ ಒಟ್ಟು 52 ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಿವೆ. ಒಟ್ಟು 12 ಕಡೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿಯಾಗಿದೆ. ಸೈಕಲ್ ಸವಾರಿ ನಮ್ಮ ಹೆಮ್ಮೆಯ ಸವಾರಿ ಎಂದು ಚಂದಾದರರು ಹೇಳುತ್ತಿದ್ದಾರೆ.
ನಗರದಲ್ಲಿ ಹೆಚ್ಚುತ್ತಿದ್ದ ವಾಹನ ದಟ್ಟಣೆಯಿಂದ ಉಂಟಾಗುತ್ತಿದ್ದ ಹಾನಿಯಿಂದ ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಿಂದ ಮೈಸೂರು ನಗರ ಪ್ರಮುಖ ಭಾಗಗಳಲ್ಲಿ ಟ್ರಿಣ್ ಟ್ರಿಣ್ ಸೇವೆ ಆರಂಭಿಸಲಾಗಿತ್ತು. ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಸಹ ವಾಹನ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು. ಸದ್ಯ ಸರ್ಕಾರ ಈ ಯೋಜನೆಗೆ ಯಶಸ್ವಿಯಾಗಿ ಜಾರಿಗೆ ಯಾಗಿದೆ.