– ಬೇರೆ ಗ್ರೂಪ್‍ಗೆ ಫೋಟೋ ಅಪ್ಲೋಡ್ ಮಾಡಿ ಸಿಕ್ಕಿಬಿದ್ದ
ಮೈಸೂರು: ಹಳೇ ವಿದ್ಯಾರ್ಥಿನಿ ಜೊತೆ ಸರ್ಕಾರಿ ಶಾಲಾ ಶಿಕ್ಷಕ ಸರಸ ಸಲ್ಲಾಪ ಮಾಡಿದ್ದು, ಶಿಕ್ಷಕನ ರಾಸಲೀಲೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವಂತಹ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜುವಿನ ಕಾಮದಾಟ ಬಯಲಾಗಿದೆ. ಈತ 20 ವರ್ಷದ ಹಳೇ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಅಲ್ಲದೇ ವಿದ್ಯಾರ್ಥಿಯನ್ನ ಮಂಚಕ್ಕೆ ಕರೆದಿದ್ದು, ಇದೀಗ ಅವರಿಬ್ಬರ ಕಾಮದಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ಕಾಮುಕ ಸಿದ್ದರಾಜು ನಾಪತ್ತೆಯಾಗಿದ್ದಾನೆ.
ಧನುರ್ವಾಯು ರೋಗದಿಂದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಯುವತಿಯೊಂದಿಗೆ ಕಾಮದಾಟ ನಡೆಸಿದ್ದಾನೆ. ಅಲ್ಲದೇ ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಆಪ್ತ ಸಹಾಯಕನಾಗಿದ್ದನು. ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದಾನೆ. ಕಾಮುಕ ಸಿದ್ದರಾಜು ವರ್ತನೆಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.
ಹೀಗಾಗಿ ಕಾಮುಕ ಶಿಕ್ಷಕ ಸಿದ್ದರಾಜುನನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ನಂಜನಗೂಡು ತಾಲೂಕಿನ ರಾಂಪುರದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕನನ್ನು ಅಮಾನತುಗೊಳಿಸಬೇಕು ಅಥವಾ ಸೇವೆಯಿಂದ ವಜಾಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕಾಮುಕ ಶಾಲಾ ಶಿಕ್ಷಕನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಇಒ ರಾಜು ಅವರು, ಮೀಡಿಯಾದ ಮೂಲಕ ಈ ವಿಚಾರ ಗೊತ್ತಾಗಿದೆ. ಇಲಾಖೆಯಿಂದ ಕ್ರಮ ತೆಗೆದುಕೊಳ್ಳುತ್ತೇನೆ. ಇದುವರೆಗೂ ಆತನ ಮೇಲೆ ದೂರು ಬಂದಿಲ್ಲ. ಈಗಲೂ ಯಾವುದೇ ದೂರು ಬಂದಿಲ್ಲ. ನಾವು ಮೀಡಿಯಾದಲ್ಲಿ ಸುದ್ದಿ ನೋಡಿ ನಮ್ಮ ಕಚೇರಿಯ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಅವರು ನೀಡಿದ ರಿಪೋರ್ಟ್ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕಾಮುಕ ಶಿಕ್ಷಕನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಅಲ್ಲದೇ ವಿದ್ಯಾರ್ಥಿನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ. ವಿದ್ಯಾರ್ಥಿನಿ ಜೊತೆ ಕಾಮದಾಟ ಮಾಡುವಾಗ ಆತನೇ ಫೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ ಸಂಬಂಧ ಹೊಂದಿದ್ದ ವಿದ್ಯಾರ್ಥಿನಿಗೆ ಫೋಟೋ ಕಳುಹಿಸುತ್ತಿದ್ದನು. ಆದರೆ ಆಕಸ್ಮಿಕವಾಗಿ ಬೇರೆ ವಾಟ್ಸಪ್ ಗ್ರೂಪ್‍ಗೆ ಫೋಟೋ ಅಪ್ಲೋಡ್ ಮಾಡಿದ್ದಾನೆ. ಆಗ ಕಾಮುಕ ಶಿಕ್ಷಕನ ಅಸಲಿ ಬಣ್ಣ ಬಯಲಾಗಿದೆ.