ಮೈಸೂರು: ಜಿಲ್ಲೆಯ ಹುಣಸೂರು (Hunsur) ಪಟ್ಟಣದಲ್ಲಿ ನಡೆದಿದ್ದ ಬಂಗಾರದ ಅಂಗಡಿ ದರೋಡೆ ಪ್ರಕರಣದಲ್ಲಿ ದರೋಡೆಯಾಗಿದ್ದ 8 ಕೆಜಿ ಚಿನ್ನ ವಶಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.
ಚಿನ್ನದಂಗಡಿಯಲ್ಲಿ ದರೋಡೆ ಪ್ರಕರಣದಲ್ಲಿ (Gold Jewellery Heist) ಒಟ್ಟು 11 ಆರೋಪಿಗಳು ಭಾಗಿಯಾಗಿದ್ದಾರೆ. ಆರೋಪಿಗಳಲ್ಲಿ ಓರ್ವ ಆಂಧ್ರ ಮೂಲದವನು, ಉಳಿದವರು ಬಿಹಾರದವರು. ಈ ಪೈಕಿ ಚೋಟುಸಿಂಗ್, ಪಂಕಜ್, ಮಹಮದ್ ಅರ್ಮನ್, ಸೋನುಸಿಂಗ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: 7 ಗನ್, 5 ಜನ, 4 ನಿಮಿಷ, ಕೆಜಿ ಕೆಜಿ ಚಿನ್ನ ದರೋಡೆ
ಇದುವರೆಗೆ 60 ಗ್ರಾಂ ಚಿನ್ನವನ್ನಷ್ಟೇ ವಶಕ್ಕೆ ಪಡೆಯಲಾಗಿದೆ. ದರೋಡೆ ಮಾಡಿದ ಚಿನ್ನವನ್ನು ಇಬ್ಬರು ಆರೋಪಿಗಳು ಕೊಂಡೊಯ್ದಿದ್ದಾರೆ. ಅವರನ್ನು ಬಂಧಿಸಿದರೆ ಚಿನ್ನವನ್ನು ಏನು ಮಾಡಿದ್ದಾರೆಂದು ತಿಳಿಯುತ್ತದೆ. ಉಳಿದ ಚಿನ್ನವನ್ನು ವಶಕ್ಕೆ ಪಡೆಯುವುದು ಸದ್ಯಕ್ಕಂತೂ ಸವಾಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

