ಮೈಸೂರು: ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ನನಗೆ ಖುಷಿ ಇಲ್ಲ. ಅವರು ಗೆದ್ದಿರಬಹುದು ಆದರೆ ಅವರು ಕಾನೂನಿನ ಪ್ರಕಾರ ಅನರ್ಹರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಪೂರ್ತಿಯಾಗಿಲ್ಲ. ಇನ್ನು 6 ಖಾತೆ ಬಾಕಿ ಇದ್ದು, ಯಡಿಯೂರಪ್ಪ ಪಟ್ಟಿಗೆ ಹೈಕಮಾಂಡ್ ಅನುಮತಿ ನೀಡಿಲ್ಲ. ಯಡಿಯೂರಪ್ಪನನ್ನು ನೋಡಿದರೆ ನನಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದರು.
ಯಡಿಯೂರಪ್ಪಗೆ ಹೈಕಮಾಂಡ್ ಅನ್ನು ಭೇಟಿ ಮಾಡಿ, ಬೇಕಾದವರನ್ನ ಮಂತ್ರಿ ಮಾಡುವ ಸ್ವಾತಂತ್ರ್ಯ ಇಲ್ಲ. ಪಾಪ ಅನ್ನಿಸುತ್ತದೆ ಯಡಿಯೂರಪ್ಪ ಅವರನ್ನು ನೋಡಿದರೆ ಎಂದು ಬಿಎಸ್‍ವೈ ಪರಿಸ್ಥಿತಿಗೆ ಮರುಕು ವ್ಯಕ್ತ ಪಡಿಸಿದರು. ಹೊಸ ಸಚಿವರು ಪಕ್ಷ ದ್ರೋಹಿಗಳು ಅವರು ಮಂತ್ರಿಯಾಗಿದ್ದು ಖುಷಿ ಇಲ್ಲ ಆದರೂ ಶುಭಕೋರುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎಂದು ತಿಳಿಸಿದರು.