ಮೈಸೂರು: ಮಸಾಜ್ ಸೆಂಟರ್ ನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಯುವತಿಯ ಆರೋಪವನ್ನು ನಟ ಮಂಡ್ಯ ರಮೇಶ್ ತಿರಸ್ಕರಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲಿನ ಲೈಂಗಿಕ ಆರೋಪದ ಕುರಿತು ಮೊದಲ ಬಾರಿ ಕೇಳಿದ ಸಂದರ್ಭದಲ್ಲಿ ನನಗೆ ಅಚ್ಚರಿ ಹಾಗೂ ದಿಗ್ಭ್ರಮೆ ಉಂಟಾಯಿತು. ಕರ್ನಾಟಕದ ಜನತೆ ನನ್ನನ್ನು ಇಷ್ಟು ಪ್ರೀತಿಸುತ್ತಾರೆ ಅವರೆಲ್ಲಾ ನನ್ನನ್ನು ಅನುಮಾನಿಸುವ ಹಾಗೇ ಆಗಿದೆ. ಇದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿದರು.
ನಾನು ಇಲ್ಲಿಯವರೆಗೆ ಒಮ್ಮೆ ಮಾತ್ರ ಅಲ್ಲಿ ಭೇಟಿ ನೀಡಿದ್ದೆ, ಆದರೆ ನಾನು ಆ ಯುವತಿಯನ್ನು ನೋಡಿಯೇ ಇಲ್ಲ. ಆದರೆ ಮಸಾಜ್ ಸೆಂಟರ್ ಮಾಲೀಕ ರಾಜೇಶ್ ನನ್ನ ನಡುವೆ ಪರಿಚಯವಿದೆ. ಆತನನ್ನು 6-7 ವರ್ಷಗಳಿಂದ ಮೈಸೂರಿನಲ್ಲಿ ನೋಡಿದ್ದೆ, ಅಲ್ಲದೇ ಆತನ ಅಂಗಡಿ ಉದ್ಘಾಟನೆ ಮಾಡಲು ತೆರಳಿದ್ದೆ. ಆದರೆ ಆತ ಇಂತಹ ಕೆಲಸ ಮಾಡುತ್ತಾನೆ ಎಂಬುದನ್ನು ಅಚ್ಚರಿ ಮೂಡಿಸಿದೆ ಎಂದರು.
ನಾನು ಮೈಸೂರಿನಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಹಾಗೇ ಆತನ ಅಂಗಡಿ ಉದ್ಘಾಟನೆ ತೆರಳಿದ್ದೆ. ಮಂಡ್ಯ ರಮೇಶ್ ಬರುತ್ತಾರೆ ಎಂಬ ವಿಷಯವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಗುರುಗಳು ಕಾರಂತರು ಇಂತಹ ಆರೋಪಗಳನ್ನು ಎದುರಿಸುವ ಶಕ್ತಿ ನೀಡಿದ್ದಾರೆ. ಆದರೆ ನನ್ನ ಕುಟುಂಬ ಮೇಲಿನ ಬೀರುವ ಪ್ರಭಾವ, ನೋವು ಎಲ್ಲವೂ ತನಗೆ ಹೆಚ್ಚು ನೋವು ಮಾಡಿದೆ ಎಂದರು.
ಇದೇ ಪ್ರಕರಣದಲ್ಲಿ ಆರೋಪ ಮಾಡಲಾಗಿರುವ ನಟ ಸಾಧು ಕೋಕಿಲ ಅವರನ್ನು ಭೇಟಿ ಮಾಡಿ ಒಂದು ವರ್ಷವಾಗಿದೆ. ಪ್ರೇಮಬರಹ ಸಿನಿಮಾ ವೇಳೆ ಭೇಟಿ ಮಾಡಿದ್ದು, ನಂತರದಲ್ಲಿ ಅವರ ನನ್ನ ಭೇಟಿ ನಡೆದಿಲ್ಲ. ಈ ಮಧ್ಯೆ ಅವರನ್ನು ಒಂದು ಕಾರ್ಯಕ್ರಮದಲ್ಲಿ ಮಾತ್ರ ಭೇಟಿ ಮಾಡಿದ್ದೆ ಅಷ್ಟೇ. ಆದರೆ ಅವರು ನಾನು ಸೇರಿ ಮಸಾಜ್ ಸೆಂಟರ್ ಗೆ ತೆರಳಿದ ಆರೋಪ ಸುಳ್ಳು. ಸಾಧುಕೋಕಿಲ ಅವರು ಸಿನಿಮಾ ಮೂಲಕ ಪರಿಚಯವಾದ ಕಲಾವಿದ, ಆದರೆ ಅವರ ನನ್ನ ನಡುವೆ ಅಷ್ಟು ಅಪ್ತತೆ ಇಲ್ಲ. ಆದರೆ ಅವರನ್ನು ನಾನು ತುಂಬಾ ಗೌರವಿಸುತ್ತೇನೆ ಎಂದರು. ಇದನ್ನೂ ಓದಿ: ಸ್ಟಾರ್ ಮಸಾಜ್ : ಮಂಡ್ಯ ರಮೇಶ್, ಸಾಧು ವಿರುದ್ಧ ಯುವತಿಯಿಂದ ದೂರು
ಯಾಕೆ ನನ್ನ ಮೇಲೆ ಈ ರೀತಿಯ ಆರೋಪ ಬಂದಿದೆ ಗೊತ್ತಿಲ್ಲ. ನಾನು ಕೋಟಿ ಕೋಟಿ ಗಳಿಸುವ ನಟನಲ್ಲ. ನಾನೊಬ್ಬ ನಾಟಕ ಕಲಾವಿದ. ಈಗಲೂ ನಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಯಾಕೆ ನನ್ನ ವಿರುದ್ಧ ಈ ಆರೋಪ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ.
ರಂಗದಲ್ಲಿ ನಾನು ಬಣ್ಣ ಹಚ್ಚಿ ನಟನೆ ಮಾಡುವ ಶಕ್ತಿ ಇದೆ ಆದರೆ ನಿಜ ಜೀವನದಲ್ಲಿ ಈ ರೀತಿ ನಾಟಕ ನಡೆಸಲು ಬರುವುದಿಲ್ಲ. ಕತೆ, ಸಂಗೀತ, ಕಲೆ, ಸಾಹಿತ್ಯ, ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ. ಇಂತಹ ವ್ಯಕ್ತಿತ್ವ ಹೊಂದಿದ್ದರೆ ನಾನು ರಂಗಭೂಮಿಯಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸಮಯದಲ್ಲೂ ಕನ್ನಡದ ಅಭಿಮಾನಿಗಳು ನನಗೆ ಬೆಂಬಲ ಸೂಚಿಸಿದ್ದಾರೆ. ಅದು ನನಗೆ ಹೆಚ್ಚಿನ ಬಲ ನೀಡಿದೆ. ಆದರೆ ಈ ಪ್ರಕರಣದಲ್ಲಿರುವ ಸತ್ಯಾಂಶಗಳ ಕುರಿತು ತನಿಖೆ ನಡೆಸಲು ಸಹಕಾರ ನೀಡುತ್ತೇನೆ. ಆದರೆ ನಾನು ಅಭಿಮಾನಿಗಳಿಗೆ ಉತ್ತರ ನೀಡಬೇಕು ನೀಡಿದ್ದೇನೆ. ನಾನು ರಂಗಭೂಮಿಯಲ್ಲಿ ಇನ್ನೂ 30 ವರ್ಷಗಳ ಸೇವೆ ನೀಡಬೇಕಿದೆ ಎಂದು ಹೇಳಿದರು.
https://www.youtube.com/watch?v=V5-24VOVog4
https://www.youtube.com/watch?v=xm-cMvGLmvQ