ಟಿಪ್ಪು ಸುಲ್ತಾನ್‍ರಿಂದ ಮೈಸೂರಿನ ಮಹಾರಾಜರಿಗೆ ಭಾರೀ ಕೆಡುಕಾಗಿದೆ: ಮೈಸೂರು ರಾಜಮಾತೆ

Public TV
1 Min Read
BLG PRAMODADEVi

ಬೆಳಗಾವಿ: ಟಿಪ್ಪು ಸುಲ್ತಾನ್ ಕಾಲಾವಧಿಯಲ್ಲಿ ಮೈಸೂರಿನ ಮಹಾರಾಜರಿಗೆ ಭಾರಿ ಕೆಡುಕಾಗಿತ್ತೆಂದು ರಾಜಮಾತೆ ಪ್ರಮೋದಾ ದೇವಿ ಹೇಳಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಕುರಿತು ಇದೇ ಮೊದಲ ಬಾರಿಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನನ ಆಕ್ರಮಣಗಳ ಕುರಿತು ಇತಿಹಾಸದಲ್ಲೇ ಉಲ್ಲೇಖವಾಗಿದೆ. ಅವರ ಕಾಲದಲ್ಲಿ ರಾಣಿ ಲಕ್ಷ್ಮಮ್ಮಣ್ಣಿ ದೇವಿಯವರನ್ನು ಶ್ರೀರಂಗಪಟ್ಟಣದ ಜನನ ಮಂಟಪದಲ್ಲಿ ನಿರ್ಬಂಧ ರೂಪದಲ್ಲಿ ಇಟ್ಟಿದ್ದರು. ಟಿಪ್ಪು ಸುಲ್ತಾನ್ ರಿಂದ ಮೈಸೂರಿನ ಮಹಾಜರಿಗೆ ಭಾರಿ ಕೆಡುಕಾಗಿದೆ ಎಂದು ನಮ್ಮ ಹಿರಿಯರಿಂದ ಕೇಳಿ ತಿಳಿದಿದ್ದೇನೆ ಎಂದು ಹೇಳಿದ್ದಾರೆ.

vlcsnap 2018 11 14 14h17m34s858

ಟಿಪ್ಪು ದಾಳಿಯಿಂದ ಮೈಸೂರು ಮಹಾರಾಜರಿಗೆ ಭಾರಿ ದುಃಖವಾಗಿತ್ತು. ಅಲ್ಲದೇ ದೀಪಾವಳಿ ದಿನದಂದೇ ಟಿಪ್ಪು ಐಯ್ಯಂಗಾರ್ ಸಮುದಾಯದ ಮೇಲೆ ಸಾಮೂಹಿಕ ನರಮೇಧ ನಡೆಸಿದ್ದ, ಹೀಗಾಗಿ ಇಂದಿಗೂ ಮೈಸೂರಿನ ಭಾಗದಲ್ಲಿ ಈ ಪಂಗಡದವರು ದೀಪಾವಳಿಯನ್ನು ಆಚರಣೆಯನ್ನು ಮಾಡುವುದಿಲ್ಲ. ಮುಮ್ಮಡಿ ಚಿಕ್ಕರಾಜ ಒಡೆಯರ್ ಕಾಲದಲ್ಲಿ ಟಿಪ್ಪು ರಾಜಮನೆತನದವರನ್ನು ಬಂಧನ ಮಾಡಿದ್ದರು. ಹೀಗಿದ್ದರೂ ನೋವುಂಟು ಮಾಡಿದವರ ಬಗ್ಗೆ ಮಾತನಾಡಬಾರದೆಂದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ ಟಿಪ್ಪು ವಿರುದ್ಧ ಯಾವುದೇ ಹೇಳಿಕೆ ನೀಡುವುದಿಲ್ಲವೆಂದು ತಿಳಿಸಿದರು.

ಇದೇ ವೇಳೆ ರಾಜ್ಯ ಸರ್ಕಾರದ ಟಿಪ್ಪು ಆಚರಣೆ ಕುರಿತು ಮಾತನಾಡಿ, ಒಬ್ಬ ನಾಗರೀಕಳಾಗಿ ನಾನು ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದಿಲ್ಲ. ಜಯಂತಿ ವಿಚಾರದ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಟಿಪ್ಪುವಿನ ವಿರುದ್ಧ ಯಾವುದೇ ಮಾತುಗಳನ್ನಾಡಲು ಇಷ್ಟಪಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *