ಬೆಂಗಳೂರು: ಪಬ್ಲಿಕ್ ಟಿವಿಯಲ್ಲಿ ಮೈಸೂರು ವಿಭಾಗದಿಂದ ಪ್ರಸಾರವಾದ ಸಾಮಾಜಿಕ ಕಳಕಳಿಯುಳ್ಳ ವರದಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಉತ್ತಮ ವರದಿಗಾಗಿ ನೀಡುವ ವಾರ್ಷಿಕ ಪ್ರಶಸ್ತಿ ಲಭ್ಯವಾಗಿದೆ.
‘ಮನೆಯವರನ್ನು ಸಾಲದ ಸುಳಿಗೆ ಸಿಲುಕಿಸುವ ಸಾವು’ ಎಂಬ ಶೀರ್ಷಿಕೆ ಅಡಿ ಇದೇ ವರ್ಷದ ಜನವರಿ 7 ರಂದು ಪಬ್ಲಿಕ್ ಟಿವಿಯಲ್ಲಿ ವಿಶೇಷ ವರದಿ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿ ಮೈಸೂರು ವರದಿಗಾರ ಕೆ.ಪಿ.ನಾಗರಾಜ್ ಮತ್ತು ಕ್ಯಾಮರಾಮೆನ್ ಕಾರ್ತಿಕ್ ಈ ವರದಿ ಮಾಡಿದ್ದರು. ಇದನ್ನೂ ಓದಿ: ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ
Advertisement
Advertisement
ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಇರುವ ಕ್ರೈಸ್ತ ಸಮುದಾಯದ ಪ್ರಾಟೆಸ್ಟೆಂಟ್ ಗುಂಪಿಗೆ ಸ್ಮಶಾನದ ವ್ಯವಸ್ಥೆ ಇಲ್ಲ. ಈ ಸಮುದಾಯದ ಶವ ಹೂಳಲು ಇದೇ ಧರ್ಮದ ಇನ್ನೊಂದು ಪಂಗಡದ ಸ್ಮಶಾನದಲ್ಲಿ ಅವಕಾಶ ಇಲ್ಲ ಮತ್ತು ಹಿಂದೂ ಧರ್ಮದ ಸ್ಮಶಾನದಲ್ಲೂ ಅವರಿಗೆ ಪ್ರವೇಶವಿಲ್ಲ. ಹೀಗಾಗಿ ಈ ಸಮುದಾಯದ ಜನರು ಶವವನ್ನು ಮೈಸೂರಿನಲ್ಲಿನ ತಮ್ಮ ಸಮುದಾಯದ ಸ್ಮಶಾನದಲ್ಲಿ ಹೂಳಬೇಕಾಗಿದೆ.
Advertisement
Advertisement
ಮೈಸೂರಿಗೆ ಶವ ಸಾಗಿಸಲು ಹಾಗೂ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರನ್ನು ಇಲ್ಲಿಗೆ ಕರೆ ತರಲು ವಾಹನಗಳ ವ್ಯವಸ್ಥೆ ಮಾಡಬೇಕಿತ್ತು. ಅಷ್ಟೇ ಅಲ್ಲದೆ ಸ್ಮಶಾನದ ಜಾಗಕ್ಕೂ ಹಣ ಕಟ್ಟಬೇಕು. ಇದಕ್ಕೆಲ್ಲ 50 ರಿಂದ 70 ಸಾವಿರ ರೂ. ವೆಚ್ಚವಾಗುತ್ತದೆ. ಹೇಳಿ ಕೇಳಿ ಕಡು ಬಡತನದಲ್ಲಿರುವ ಈ ಸಮುದಾಯದ ಕುಟುಂಬಗಳು ಹಣಕ್ಕಾಗಿ ಬಡ್ಡಿಗಾಗಿ ಸಾಲ ಪಡೆಯುತ್ತಿದ್ದರು. ಅಲ್ಲಿಗೆ ಈ ಸಾಲದ ಹಣ ತೀರಿಸುವಷ್ಟತ್ತಿಗೆ ಅವರ ಸ್ಥಿತಿ ದೇವರಿಗೆ ಮಾತ್ರ ಪ್ರೀತಿ.
ಈ ಸಮಸ್ಯೆದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯಿಂದ ಈ ವರದಿ ಪ್ರಸಾರ ಮಾಡಿತ್ತು. ಈ ವರದಿ ಪರಿಣಾಮ ಜಿಲ್ಲಾಡಳಿತ ಈ ಸಮುದಾಯಕ್ಕೆ ಸ್ಮಶಾನದ ಜಾಗ ನೀಡಲು ಜಾಗದ ಸರ್ವೇ ಕಾರ್ಯ ಕೂಡ ನಡೆಸಿದೆ.
https://www.youtube.com/watch?v=kQGSTCALyto&feature=youtu.be