ಮೈಸೂರು: ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮಂಜುನಾಥ್‍ಗೆ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮು ಟೀಂನಿಂದ ಹಲ್ಲೆ ಮಾಡಲಾಗಿದೆ. ರೌಡಿಶೀಟರ್ ಸೋಮು ಸಹೋದರಿ ಲತಾ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು ಶುಕ್ರವಾರ ರಾತ್ರಿ 11 ಗಂಟೆಯಾದರೂ ಅಂಗಡಿ ತೆರೆಯಲಾಗಿತ್ತು. ಈ ವೇಳೆ ಅಂಗಡಿ ಮುಚ್ಚುವಂತೆ ಪೊಲೀಸ್ ಮುಖ್ಯ ಪೇದೆ ಹೇಳಿದ್ದಾರೆ.
Advertisement
Advertisement
ಈ ವೇಳೆ ವಾಗ್ವಾದಕ್ಕೆ ತಿರುಗಿ ಪೊಲೀಸ್ ಮುಖ್ಯಪೇದೆ ಮಂಜುನಾಥ್ ಮೇಲೆ ರೌಡಿಶೀಟರ್ ಸೋಮ ಮತ್ತು ಅವನ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಸಂಬಂಧ ಸೋಮು ಹಾಗೂ ಆತನ ಸಹೋದರ ಚಂದ್ರಶೇಖರ್, ಸಹೋದರಿ ಲತಾ ವಿರುದ್ಧ ದೇವರಾಜ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮು ನಾಪತ್ತೆಯಾಗಿದ್ದಾನೆ.