ಮೈಸೂರು: ಹತ್ತು ಬಾರಿ ಪೊಲೀಸ್ ಠಾಣೆಗೆ ಹೋದರೂ ನಮ್ಮನ್ನು ಒಬ್ಬರು ಕ್ಯಾರೆ ಅಂತಿಲ್ಲ. ನೇರವಾಗಿ ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಹೇಳೋಣಾ ಅಂದರೆ ನಾನು ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ ದಾಖಲೆ ಏನಿರುತ್ತೆ ಅಂತಾ ಜನರು ಸುಮ್ಮನೆ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಸಹಿಸಿಕೊಳ್ತಿದ್ರು. ಆದರೆ ಇನ್ಮುಂದೆ ಮೈಸೂರಿನ ನಾಗರಿಕರಿಗೆ ಈ ಸಮಸ್ಯೆ ಇಲ್ಲ.
Advertisement
ಪ್ರತಿ ಪೊಲೀಸ್ ಠಾಣೆಯಲ್ಲೂ ಹೈಟೆಕ್ ಸ್ವಾಗತ ಕಮಾನು ಆರಂಭವಾಗಿದ್ದು ಪೊಲೀಸ್ ಠಾಣೆಗೆ ಯಾರೇ ಜನಸಾಮಾನ್ಯರು ಬರಲಿ ಅದು ಕಂಪ್ಯೂಟರ್ ನಲ್ಲಿ ವಿವರ ಸಮೇತ ದಾಖಲಾಗುತ್ತೆ. ಈ ವಿವರ ದಾಖಲೀಕರಣ ಮತ್ತು ನಿರ್ವಹಣೆಯನ್ನು ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯೇ ಮಾಡುತ್ತಾರೆ.
Advertisement
Advertisement
ಅವರಿಗೂ ಆ ಪೊಲೀಸ್ ಠಾಣೆಯ ಸಿಬ್ಬಂದಿಗೂ ಸಂಬಂಧ ಇರುವುದಿಲ್ಲ. ಇಂತಹದೊಂದು ಜನ ಸ್ನೇಹಿ ವ್ಯವಸ್ಥೆಯನ್ನು ಇವತ್ತು ನಗರ ಪೊಲೀಸ್ ಆಯುಕ್ತರಾದ ಸುಬ್ರಹ್ಮಣ್ಯಶ್ವೇವರ ರಾವ್ ಮೈಸೂರು ನಗರದ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಉದ್ಘಾಟಿಸಿದರು.
Advertisement
ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮತ್ತಷ್ಟು ಉತ್ತಮ ಬಾಂಧವ್ಯ ಬೆಸೆಯಲು ಈ ವ್ಯವಸ್ಥೆ ಜಾರಿಯಾಗಿದೆ.