ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಎಂದು ಹೇಳುವುದಿಲ್ಲ. ಮೈಸೂರಿನ ಜನರಿಗೆ ನವಿಲು ಯಾವುದು ಕೆಂಭೂತ ಯಾವುದು ಎಂದು ಗೊತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹದೇವಪ್ಪ, ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಯಾವತ್ತು ಹೇಳುವುದಿಲ್ಲ. ಈ ರಸ್ತೆ ವಿಚಾರದಲ್ಲೇ ಯಡಿಯೂರಪ್ಪ ಅವರು ನನಗೆ ಹುಬ್ಬಳ್ಳಿಯಲ್ಲಿ ಸನ್ಮಾನ ಮಾಡಿದ್ದಾರೆ. ಇದಕ್ಕಿಂತಾ ಸಾಕ್ಷಿ ಇನ್ನು ಏನು ಬೇಕು ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿರುವ ಬಗ್ಗೆ ಮಾತನಾಡಿ, ಅವರು ಸದ್ಯ ಭಾರತದ ಹೆಸರು ಬದಲಾಯಿಸಲು ಮುಂದಾಗುತ್ತಿಲ್ಲವಲ್ಲ ಅಷ್ಟೇ ಸಾಕು. ಹೆಸರುಗಳ ಬದಲಾವಣೆ ಅವರ ಮನಃಸ್ಥಿತಿ ತೋರಿಸುತ್ತದೆ. ಹೆಸರು ಬದಲಾವಣೆಗೆ ತೋರಿಸಿರುವ ಆಸಕ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಸಂರಕ್ಷಣೆಗೆ, ಅಲ್ಲಿನ ಪ್ರಾಣಿಗಳ ಸಂರಕ್ಷಣೆಗೆ ವಹಿಸಬೇಕೆಂದು ಮಹದೇವಪ್ಪ ಟಾಂಗ್ ನೀಡಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ