ಮೈಸೂರು: ವೃದ್ಧರೊಬ್ಬರ ತಲೆಯನ್ನು ಕಡಿದು ಬಳಿಕ ಯುವಕರು ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆಯೊಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕು ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪೇಗೌಡ (65) ಕೊಲೆಯಾದ ವೃದ್ಧ. ಚೇತನ್ ಹಾಗೂ ಮಧು ಎಂಬವರು ಕೆಂಪೇಗೌಡರನ್ನು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ್ದಾರೆ. ಕೆಂಪೇಗೌಡರು ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕರು ವೃದ್ಧನ ತಲೆಯನ್ನೇ ತುಂಡರಿಸಿದ್ದಾರೆ. ಅಲ್ಲದೆ ಬಳಿಕ ರುಂಡವನ್ನು ಹಿಡಿದುಕೊಂಡು ಬನ್ನೂರು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ಸಂಬಂಧ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.