ಮೈಸೂರು: ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹದ ಎಂಟೇ ತಿಂಗಳಲ್ಲಿ ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಜಿಲ್ಲೆಯ ನಂಜನಗೂಡಿನ ನಿವಾಸಿಯಾಗಿದ್ದ ಹೆಚ್.ಆರ್ ಬಿಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಚ್.ಡಿ ಕೋಟೆ ಸರಗೂರು ತಾಲೂಕಿನ ಹಳೆಯೂರು ಗ್ರಾಮದ ಪತಿಯ ಮನೆಯಲ್ಲೇ ಬಿಂದು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾರೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಿಂದು ಪೋಷಕರು ಆರೋಪಿಸಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬಿಂದು ಪತಿ ಗುರುಸ್ವಾಮಿ, ಮಾವ ಚಂದ್ರ, ಅತ್ತೆ ತಾಯಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಪತಿಯ ಸಂಬಂಧಿಗಳಾದ ಪ್ರೇಮ, ರೇಖಾ, ಕಾವ್ಯ ಮತ್ತು ವಲುವ ಸೇರಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.