– ಕೊರೊನಾ ಪರೀಕ್ಷೆಗೂ ಮೊದಲು ಎಲ್ಲೆಲ್ಲೆ ಹೋಗಿದ್ದ ರೋಗಿ?
– ಕೊರೊನಾದಿಂದ ಗುಣಮುಖ ಬಳಿಕ ಹೇಳಿದ್ದೇನು?
ಮೈಸೂರು: ನಂಜನಗೂಡು ಕಾರ್ಖಾನೆಯ ಕೊರೊನಾ ಸೋಂಕಿನಿಂದ ಇಡೀ ಮೈಸೂರು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಸೇರಿಕೊಂಡಿದೆ.
ನಂಜನಗೂಡು ಕಾರ್ಖಾನೆಯಲ್ಲಿ ಉದ್ಯೋಗಿ ಕೊರೊನಾ ಸೋಂಕಿತ ರೋಗಿ-52 ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಖಾಸಗಿ ವೆಬ್‍ಸೈಟ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಅವರು ತಮ್ಮ ಪ್ರಯಾಣದ ವಿವರ ಹಾಗೂ ಕೆಲವು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.
Advertisement
Advertisement
ರೋಗಿ-52: ನನ್ನ ಹತ್ತಿರ ಪಾಸ್‍ಪೋರ್ಟ್ ಇಲ್ಲ, ನಾನು ಚೀನಾಕ್ಕೆ ಹೇಗೆ ಹೋಗ್ಲಿ….?
ಪ್ರತಿನಿಧಿ: ಹೌದಾ..?
ರೋಗಿ-52: ನನಗೆ ಕೊರೊನಾ ಹೇಗೆ ಬಂತು ಅಂತ ಗೊತ್ತಿಲ್ಲ. ನಾನು ಕಂಪನಿ ಬಿಟ್ರೆ ಮನೆ, ಮನೆ ಬಿಟ್ರೆ ಕಂಪನಿ. ಎಲ್ಲೂ ಹೊರಗಡೆ ಹೋದವನಲ್ಲ. ಡೀಟೈಲ್ಸ್ ನೋಡಿದ್ದೀರ. ನಾನು ಚಾಮರಾಜನಗರ, ಗುಂಡ್ಲುಪೇಟೆಗೆ ಹೋಗಿದ್ದೆ. ಡೇಟ್ ಗೊತ್ತಿಲ್ಲ ಯಾವಾಗಂತ. ಚಾಮರಾಜನಗರದಲ್ಲಿ ಈ ಥರ ಕೊರೊನಾ ಕನ್ಸರ್ನ್ ಏನೂ ಇಲ್ಲ.
ಪ್ರತಿನಿಧಿ: ಚೀನಾದಿಂದ ನಿಮ್ಮ ಕಂಪನಿಗೆ ಶಿಪ್‍ಮೆಂಟ್ ಬಂದಿತ್ತಂತೆ ನಿಜನಾ..?
Advertisement
Advertisement
ರೋಗಿ-52: ಮೇಡಂ ನಂದು ಕಾರ್ಡಿನೇಷನ್ ಡಿಪಾರ್ಟ್‍ಮೆಂಟ್. ನಮಗದು ಬರಲ್ಲ, ಅದೇನಿದ್ರೂ ಸ್ಟೋರ್ ಡಿಪಾರ್ಟ್‍ಮೆಂಟ್‍ಗೆ ಬರುತ್ತೆ. ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಷ್ಟೇ.
ಪ್ರತಿನಿಧಿ: ನಿಮ್ದು ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್ ಅಲ್ವಾ?
ಸಂಖ್ಯೆ 52: ಹೌದು, ಬರೀ ಡಾಂಕ್ಯುಮೆಂಟೇಷನ್ ಸೆಕ್ಷನ್..
ಪ್ರತಿನಿಧಿ: ಶಿಪ್‍ನಿಂದ ನೀವು ರಿಸೀವ್ ಮಾಡ್ಕೊಂಡಿಲ್ವಾ..?
ರೋಗಿ-52: ಇಲ್ಲ, ಇಲ್ಲ ಮೇಡಂ… ನಮ್ಮದೇನಿದ್ರೂ ಡಾಂಕ್ಯುಮೆಂಟೇಷನ್ ಸೆಕ್ಷನ್. ನಮ್ಮದೇನಿದ್ರೂ ಡಾಂಕ್ಯುಮೆಂಟ್ ಏನ್ ಬರುತ್ತೆ ಅದನ್ನ ಸ್ಟೋರ್ ಮಾಡ್ತೀವಿ ಮೇಡಂ.
ಪ್ರತಿನಿಧಿ: ಸೋ.. ನೀವು ಆಫೀಸ್ ರೂಂನಿಂದ ಹೊರಗಡೆ ಬರೋ ಇದೇ ಇಲ್ವಾ.?
ರೋಗಿ-52: ಬರ್ತಿವಿ ಮೇಡಂ, ಯಾಕಂದ್ರೆ ಮ್ಯಾನೇಜರ್ ಇರ್ತಾರೆ ಅವರಿಗೆ ರಿಪೋರ್ಟಿಂಗ್ ಮಾಡ್ಬೇಕಲ್ವಾ..? ಅವರು ಕೆಲ್ಸ ಹೇಳಿರ್ತಾರೆ. ಅವರನ್ನ ಮೀಟ್ ಮಾಡ್ತಾ ಇರ್ತಿವಿ, ಅವರೊಂದಿಗೆ ಮಾತಾಡ್ತಾ ಇರ್ತಿವಿ.
ಪ್ರತಿನಿಧಿ: ಸೋ.. ನೀವು ಗೋಡಾನ್‍ಗೆಲ್ಲ ಹೋಗ್ತೀರಾ, ರೆಗ್ಯುಲರ್ ಆಗಿ..?
ರೋಗಿ 52: ಇಲ್ಲ ಇಲ್ಲ… ನಾವೇನ್ ಗೋಡಾನ್‍ಗೆ ಹೋಗಲ್ಲ ಮೇಡಂ. ನಮ್ಮ ಡಿಪಾರ್ಟ್‍ಮೆಂಟ್‍ನಲ್ಲಿ ಡಾಂಕ್ಯುಮೆಂಟ್ ಬರೋದನ್ನು ಸ್ಟೋರ್ ಮಾಡ್ತೀವಿ. ಇನ್ವೆಷ್ಟಿಗೇಷನ್ ಡಾಂಕ್ಯುಮೆಂಟೇಷನ್ ಬೇಕು ಅಂದ್ರೆ ಕೊಡ್ತೀವಿ.
ಪ್ರತಿನಿಧಿ: ಅಷ್ಟೇನಾ ನಿಮ್ ಕೆಲ್ಸ?
ರೋಗಿ-52: ರಿಪೋರ್ಟಿಂಗ್ ಮ್ಯಾನೇಜರ್ ಕೆಲ್ಸ ಹೇಳಿದ್ರೆ ಅವರ ಜೊತೆ ಸ್ವಲ್ಪ ಮಾಡ್ತೇವೆ.
ಪ್ರತಿನಿಧಿ: ನಿಮ್ಮ ರಿಪೋರ್ಟಿಂಗ್ ಮ್ಯಾನೇಜರೆಲ್ಲ ಪಾಸಿಟಿವ್ ಆಗಿ ಟೆಸ್ಟ್ ಆಗಿದ್ದಾರಾ..? ಅವರದೆಲ್ಲ ಏನ್ ರಿಪೋರ್ಟ್ ಬಂದಿದೆ?
ರೋಗಿ-52: ಅವರದ್ದನ್ನೆಲ್ಲ ನೆಗೆಟಿವ್ ಬಂದಿದೆ, ಮೇಡಂ.