ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ಯುವಕನ ಕೊಲೆಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರು ಸಾವಿಗೀಡಾಗಿದ್ದಾರೆ. ಒಂದು ಕೊಲೆ, ಎರಡು ಎನ್ನುವಂತಾಗಿದೆ ಪ್ರಕರಣ.
ನಿನ್ನೆ ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ ತಂದೆ – ಮಗ ಆರೋಪಿಯಾಗಿದ್ದ ಕಾರಣ ಮನನೊಂದು ಆರೋಪಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಸುದ್ದಿ ಕೇಳಿ ಜೈಲಿನಲ್ಲಿದ್ದ ಆರೋಪಿ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್ಐಆರ್
Advertisement
Advertisement
ಮೈಸೂರಿನ ವಿದ್ಯಾನಗರದಲ್ಲಿ ಬಾಲರಾಜ್ ಎಂಬ ಯುವಕನ ಕೊಲೆ ಆಗಿತ್ತು. ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಆರೋಪಿಗಳಲ್ಲಿ ಸಾಮ್ರಾಟ್ ಮತ್ತು ತೇಜಸ್ ಎಂಬ ತಂದೆ – ಮಗ ಕೂಡ ಇದ್ದರು.
Advertisement
Advertisement
ತಂದೆ – ಮಗ ಜೈಲು ಸೇರಿದ್ದರಿಂದ ಅವಮಾನಗೊಂಡ ಸಾಮ್ರಾಟ್ ಪತ್ನಿ ಇಂದ್ರಾಣಿ (35) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಈ ವಿಚಾರ ಜೈಲಿನಲಿದ್ದ ತಂದೆ – ಮಗನಿಗೆ ತಿಳಿದಿದೆ. ಈ ಆಘಾತದಲ್ಲಿ ಇಂದ್ರಾಣಿ ಪತಿ ಸಾಮ್ರಾಟ್ಗೆ ಹೃದಯಾಘಾತವಾಗಿ ಜೈಲಿನಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ
Web Stories