– ಬರೀ 600 ರೂ. ಕಟ್ಟಿಸಿಕೊಂಡು ಸೈಟ್ ಮಾರಾಟ
– ರಿಯಲ್ ಎಸ್ಟೇಟ್ ಉದ್ಯಮಿಗೆ ಬರೋಬ್ಬರಿ 23 ಸೈಟ್ ಹಂಚಿಕೆ
ಮೈಸೂರು: ಮುಡಾ ಸೈಟ್ (MUDA Scam Case) ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000, 6,000 ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
Advertisement
ಮೈಸೂರಿನಲ್ಲಿ 60*40 ಸೈಟ್‌ಗಳು ಕಡ್ಲೆಪುರಿಗಿಂತಲೂ ಕಡೆಯಾಗಿದೆ. ಮೂರು ಸಾವಿರಕ್ಕೆ ಒಂದರಂತೆ ಬರೋಬ್ಬರಿ 23 ಸೈಟ್‌ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗೆ ಮುಡಾ ಬರೆದುಕೊಟ್ಟಿದೆ. ಮುಡಾ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬಡಾವಣೆ ಮಂಜುನಾಥ್‌ನಿಂದ ಮಹಾ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ
Advertisement
Advertisement
5 ದಿನದಲ್ಲಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಒಂದು ಸೈಟ್‌ಗೆ 3 ಸಾವಿರದ ರೀತಿ 23 ಸೈಟ್‌ಗಳನ್ನು ಉದ್ಯಮಿ ಮಂಜುನಾಥ್‌ಗೆ ಮುಡಾ ರಿಜಿಸ್ಟರ್ ಮಾಡಿಕೊಟ್ಟಿದೆ. ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಜಾಗ ಕಳೆದುಕೊಂಡಿದ್ದರೆ ಎಂಬ ಮಾಹಿತಿಯೇ ಇಲ್ಲ. ಸುಮ್ಮನೆ ಪ್ರೋತ್ಸಾಹದಾಯಕ ಎಂದು ನಮೂದಿಸಿ ಸೈಟ್‌ಗಳ ರಿಜಿಸ್ಟರ್ ಮಾಡಲಾಗಿದೆ. ಎರಡೆರೆಡು ದಿನಗಳ ಅಂತರದಲ್ಲಿ ಒಟ್ಟು 6 ದಿನದಲ್ಲಿ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ 23 ಸೈಟಗಳು ಉದ್ಯಮಿ ಮಂಜುನಾಥ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ.
Advertisement
ಕೇವಲ 600 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಸೈಟ್ ಮಾರಾಟ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ನಿವೇಶನಕ್ಕೆ ಕನಿಷ್ಟ 97 ಲಕ್ಷ ನಷ್ಟ ಆಗಿದೆ. 5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿಯಾಗಿದೆ. ಉಪ ನೋಂದಣಾಧಿಕಾರಿ ಶಾಮಿಲಿನಿಂದ ಭಾರಿ ಅಕ್ರಮ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮುಡಾದಲ್ಲಿ ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ: ಕಾಂಗ್ರೆಸ್ ಶಾಸಕ ಸ್ಫೋಟಕ ಹೇಳಿಕೆ
ಎಲ್ಲೆಲ್ಲಿ ಎಷ್ಟೆಷ್ಟು ಸೈಟ್ ಮಾರಾಟ?
ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್‌ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಬರೆದುಕೊಟ್ಟಿರುವ ನಿವೇಶನಗಳ ವಿವರ:
ದಿನಾಂಕ.05.04.2023 ರಂದು 60*40 ಅಳತೆಯ ಮೂರು ನಿವೇಶನ.
06.04.2023 ರಂದು 60*40 ಅಳತೆಯ ಮೂರು ನಿವೇಶನ.
18.04.2023ರಂದು 60*40 ಅಳತೆಯ 8 ನಿವೇಶನ.
19.04.2023 ರಂದು 60*40 ಅಳತೆಯ 9
23 ನಿವೇಶನಗಳು ರಿಜಿಸ್ಟರ್.
ಮೂಲ ಮಾಲೀಕರ ಹೆಸರು ಕೈ ಬಿಟ್ಟು ಜಿಪಿಎ ಪ್ರತಿನಿಧಿ ಮಂಜುನಾಥ್ ನೇರವಾಗಿ ರಿಜಿಸ್ಟರ್ ಆಗಿದೆ. ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತದಲ್ಲಿ ನಿವೇಶನ ಮಂಜೂರಾಗಿದೆ. 60*40 ಅಳತೆಯ ನಿವೇಶನಗಳು ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ಈಗ 60*40 ನಿವೇಶನದ ಬೆಲೆ 2 ಕೋಟಿ ದಾಟಿದೆ. ಇಂತಹ ಬೆಲೆಬಾಳುವ ನಿವೇಶನಗಳನ್ನ ಕೇವಲ ಮೂರು ಸಾವಿರ ರೂಪಾಯಿಗೆ ಒಂದರAತೆ ಮುಡಾ ಕೊಟ್ಟಿದೆ.
ಒಂದು ವರ್ಷದ ಹಿಂದೆಯೇ ಮುಡಾ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮುಡಾ ಆಯುಕ್ತ ದಿನೇಶ್ ಉದ್ಯಮಿ ಮಂಜುನಾಥ್ ಮೇಲೆ ಲೋಕಾಯುಕ್ತ ಮೇಲೆ ಒಂದು ವರ್ಷದ ಹಿಂದೆಯೇ ದೂರು ಕೊಡಲಾಗಿತ್ತು. ಕೃಷ್ಣ ಎಂಬ ವ್ಯಕ್ತಿಯಿಂದ ಮೈಸೂರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ಒಬ್ಬನೇ ವ್ಯಕ್ತಿಯಿಂದ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು, ನೌಕರರುಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿತ್ತು. ಇದನ್ನೂ ಓದಿ: ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್. ಅಶೋಕ್ ಬಾಂಬ್
150 ಪುಟದ ದಾಖಲೆ ಒಂದು ವರ್ಷದ ಹಿಂದೆಯೇ ಕೊಟ್ಟರು ಲೋಕಾಯುಕ್ತ ಮೌನವಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದರಿಂದ ಲೋಕಾಯುಕ್ತ ಅಂದಿನ ಎಸ್ಪಿ ಮೇಲೆಯೇ ಅನುಮಾನ ಮೂಡಿದೆ. ಎಲ್ಲಾ ದಾಖಲೆ ಇದ್ದರು ಒಂದೇ ಒಂದು ನೋಟಿಸ್ ಕೊಡುವ ಕೆಲಸವನ್ನು ಲೋಕಾಯುಕ್ತ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ವ್ಯಕ್ತವಾಗಿದೆ.