Connect with us

ಸಚಿವರಾಗಿ ಕೆಲಸ ಮಾಡದ್ದಕ್ಕೆ ಈಗ ಮಾತನಾಡಲು ಕೂರಿಸಲಾಗಿದೆ: ಗುಂಡೂರಾವ್‍ಗೆ ಪ್ರತಾಪ್ ಸಿಂಹ ತಿರುಗೇಟು

ಸಚಿವರಾಗಿ ಕೆಲಸ ಮಾಡದ್ದಕ್ಕೆ ಈಗ ಮಾತನಾಡಲು ಕೂರಿಸಲಾಗಿದೆ: ಗುಂಡೂರಾವ್‍ಗೆ ಪ್ರತಾಪ್ ಸಿಂಹ ತಿರುಗೇಟು

ಮೈಸೂರು: ಬಿಎಸ್ ಯಡಿಯೂರಪ್ಪನವರನ್ನು ಉಗಾಂಡದ ಸರ್ವಾಧಿಕಾರಿಯಾದ  ಇದಿ ಅಮೀನ್‍ಗೆ ಹೋಲಿಸಿ ವ್ಯಂಗ್ಯವಾಗಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿ ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳ ಜೊತೆ ನಗರದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಗುಂಡೂರಾವ್ ಅವರಿಗೆ ತಂದೆ ಸಂಸ್ಕಾರ ಕಲಿಸಿರೋದು ಇದೇನಾ? ಸಚಿವರಾಗಿದ್ದಾಗ ದಿನೇಶ್ ಗುಂಡೂರಾವ್ ಸಾಧನೆ ಏನು? ಐಟಿ ದಾಳಿಯ ಬಳಿಕ ಚಿಕ್ಕರಾಯಪ್ಪನನ್ನು ಬಚ್ಚಿಟ್ಟವರು ಯಾರು? ಗೃಹ ಇಲಾಖೆ ಗುಪ್ತಚರ ಇಲಾಖೆ ಯಾರ ಕೈಯಲ್ಲಿದೆ? ಚಿಕ್ಕರಾಯಪ್ಪನನ್ನು ಬಚ್ಚಿಡುವ ಅಗತ್ಯತೆ ಏನಿದೆ ಎಂದು ಪ್ರಶ್ನೆ ಕೇಳಿದ್ದಾರೆ.

ನಿಷ್ಕ್ರಿಯ ಮಂತ್ರಿ: ದಿನೇಶ್ ಗುಂಡೂರಾವ್ ಒಬ್ಬ ನಿಷ್ಕ್ರಿಯ ಮಂತ್ರಿ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿ ಏನು ಕೆಲಸ ಮಾಡಿದ್ದಾರೆ? ಸಚಿವರಾಗಿ ಕೆಲಸ ಮಾಡದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಸ್ಥಾನದಿಂದ ತೆಗೆದಿರುವುದು. ಈಗ ಅವರು ಮಾತನಾಡಲು ಮಾತ್ರ ಅರ್ಹರಾಗಿದ್ದಾರೆ ಎಂದು ಲೇವಡಿ ಮಾಡಿದರು.

ತಂದೆಯ ಸಾಧನೆ ಏನು: ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ. ಆದರೆ ವೈಯುಕ್ತಿಕ ನಿಂದನೆ ಮಾಡಿದ್ದು ಸರಿಯಿಲ್ಲ. ನಿಮ್ಮ ತಂದೆ ಗುಂಡೂರಾವ್ ಸಿಎಂ ಆಗಿದ್ದಾಗ ಮಾಡಿದ ಸಾಧನೆ ಏನು? ಅವರು ಈಜುಕೊಳಕ್ಕೆ ಹಾರಿದ್ದು ಮತ್ತು ರೌಡಿಗಳನ್ನು ಹುಟ್ಟಿ ಹಾಕಿದ್ದು ಇದು ಬಿಟ್ಟರೆ ಬೇರೆ ಯಾವ ಸಾಧನೆ ಮಾಡಿದ್ದಾರೆ ದಿನೇಶ್ ಗುಂಡೂರಾವ್ ಗೆ ಪ್ರತಾಪ್ ಸಿಂಹ ಪ್ರಶ್ನೆ ಹಾಕಿದರು.

ಇದನ್ನೂ ಓದಿ: ಉಗಾಂಡದ ಹುಚ್ಚು ಸರ್ವಾಧಿಕಾರಿ ಇದಿ ಅಮೀನ್‍ನಂತೆ ಬಿಎಸ್‍ವೈ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

Advertisement
Advertisement