Connect with us

Bengaluru City

ನಿದ್ದೆ ಮಾಡ್ತಿದ್ದ ಇಬ್ಬರು ಸಂಸದರಿಗೆ ಬಿಎಸ್‍ವೈ ಬಹಿರಂಗ ಕ್ಲಾಸ್

Published

on

ಬೆಂಗಳೂರು: ಬಿಜೆಪಿ ಕಾರ್ಯಾಗಾರದಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ನಿದ್ದೆಯಿಂದ ತೂಕಡಿಸುತ್ತಿದ್ದ ಇಬ್ಬರು ಸಂಸದರಿಗೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಹಿರಂಗವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅರಮನೆ ಮೈದಾನದಲ್ಲಿ ಬೂತ್ ಸಶಕ್ತೀಕರಣ ಕಾರ್ಯಾಗಾರದಲ್ಲಿ ಬಿಎಸ್‍ವೈ ಮಾತನಾಡುತ್ತಿದ್ದರು. ಈ ವೇಳೆ ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ಬೀದರ್ ಸಂಸದ ಭಗವಂತ ಖೂಬಾ ತೂಕಡಿಸುತ್ತಿದ್ದರು. ಇದನ್ನು ನೋಡಿದ ಬಿಎಸ್‍ವೈ ಹಿಂದಿನ ಸೀಟ್ ಬಿಟ್ಟು ಮುಂದೆ ಬಂದು ಕುಳಿತುಕೊಳ್ಳಿ ಹೇಳಿದರು. ಬಿಎಸ್‍ವೈ ಅವರ ಸೂಚನೆ ಬಳಿಕ ಎಚ್ಚೆತ್ತು ಮುಂದೆ ಬಂದು ಇಬ್ಬರು ಸಂಸದರು ಎರಡನೇ ಸಾಲಿನಲ್ಲಿ ಕುಳಿತರು.

ಪೈಪೋಟಿ ಬೇಡ: ಟಿಕೆಟ್‍ಗಾಗಿ ಯಾರು ಪೈಪೋಟಿ ಮಾಡುವುದು ಬೇಡ. ಈ ವಿಚಾರವನ್ನು ಎಲ್ಲರೂ ಸ್ಪಷ್ಟವಾಗಿ ಅರಿಯಬೇಕು. ಈಗಾಗಲೇ ಹೈಕಮಾಂಡ್ ಕೂಡ ಸ್ಪಷ್ಟಪಡಿಸಿದೆ. ಎರಡು ಅಥವಾ ಮೂರು ಸರ್ವೇ ನಡೆಸಿದ ಬಳಿಕ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಬಿಎಸ್‍ವೈ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ನವಕರ್ನಾಟಕ ನಿರ್ಮಾಣ ಪರಿವರ್ತನೆ ಯಾತ್ರೆ ಬೆಂಗಳೂರಿನಿಂದ ಆರಂಭವಾಗಲಿದ್ದು, ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. 3.30 ಲಕ್ಷ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿತ್ತಾರೆ. ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾರಿಸೋ ಮೂಲಕ ಯಾತ್ರೆಗೆ ಚಾಲನೆ ಸಿಗಲಿದ್ದು, ಜನವರಿ 15ರ ತನಕ ನವಕರ್ನಾಟಕ ರಥಯಾತ್ರೆ ಮಾಡುತ್ತೇವೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ನವಕರ್ನಾಟಕ ಯಾತ್ರೆ ಸಂಚಾರ ಮಾಡುತ್ತೆ. ನವ ಕರ್ನಾಟಕ ರಥಯಾತ್ರೆ ವೇಳೆ ಪ್ರತಿ ಜಿಲ್ಲೆಯಲ್ಲಿ ನವಶಕ್ತಿ ಸಮಾವೇಶ ನಡೆಯಲಿದೆ ಎಂದು ಬಿಎಸ್‍ವೈ ತಿಳಿಸಿದರು.

ದೊಡ್ಡ ಹೋರಾಟ: ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣದಲ್ಲಿ ಬಿಜೆಪಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ. ಸಿಐಡಿ ತನಿಖೆ ಮೂಲಕ ಪ್ರಕರಣದ ಸಾಕ್ಷ್ಯಾಧಾರ ನಾಶಮಾಡಲಾಗಿದೆ. ಸೆ.16 ರಂದು ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ದಿನಾಚರಣೆಯನ್ನು ಸ್ವಚ್ಛತಾ ದಿನವನ್ನಾಗಿ ಆಚರಣೆ ಮಾಡುತ್ತೇವೆ ಎಂದರು.

ಬೂತ್ ಸಶಕ್ತೀಕರಣ ಕಾರ್ಯಾಗಾರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಚಾಲನೆ ನೀಡಿದರು. ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಿಟಿ ರವಿ, ಗೋವಿಂದ ಕಾರಜೋಳ, ನಳೀನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

www.publictv.in