ಶಿಥಿಲಗೊಂಡ ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿರೋ ಕಾರ್ಮಿಕ

Public TV
0 Min Read
maharani college building collapse

ಮೈಸೂರು: ಶಿಥಿಲಗೊಂಡ ಕಾರಣ ದುರಸ್ತಿ ಮಾಡುತ್ತಿದ್ದ ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತಗೊಂಡು ಓರ್ವ ಕಾರ್ಮಿಕ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ.

80 ವರ್ಷಗಳ ಹಳೆಯ ಕಟ್ಟಡ ಇದ್ದಾಗಿದ್ದು, ದುರಸ್ಥಿ ಕಾರ್ಯ ಕಳೆದ ತಿಂಗಳು ಆರಂಭವಾಗಿತ್ತು. ಇಂದು ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಕಾರ್ಮಿಕ ಅದರ ಅಡಿ ಸಿಲುಕಿಕೊಂಡಿದ್ದಾರೆ.

ಗೌಸಿಯನಗರದ ಸದ್ದಾಂ ಎಂಬವರೇ ಕಟ್ಟಡದ ಅಡಿ ಸಿಲುಕಿರುವ ಕಾರ್ಮಿಕ. ಕಿಟಕಿಗಳನ್ನು ತೆಗೆದುಹಾಕುವ ವೇಳೆ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Share This Article