ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋತ್ರೆ ಸಮ್ಮಿಶ್ರ ಸರ್ಕಾರ ಉಳಿಯಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.
ಸಮ್ಮಿಶ್ರ ಸರ್ಕಾರ 5 ವರ್ಷ ಇರಬೇಕು. ಆದ್ರೆ ನವು ಸೋತ್ರೆ ಸರ್ಕಾರ ಇರುತ್ತದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿನೂ ಆಯ್ತು. ಮುಗೀತು ನನ್ನದು. ಸರ್ಕಾರ ಇದೆಯಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ ದೇವೇಗೌಡ ಹಾಗೂ ಸಾರಾ ಮಹೇಶ್, ತಮ್ಮಣ್ಣ, ಪುಟ್ಟರಾಜು ಇವೆಲ್ಲರೂ ಮಂತ್ರಿಗಳಾಗಿದ್ದಾರೆ. ನಾನೇನೂ ಇಲ್ಲ. ನಮ್ಮವರು 27 ಮಂದಿ ಇದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರದಂಗೆ ನೋಡಿಕೊಳ್ಳಬೇಕಲ್ವ. ಅದಕ್ಕೆ ತಾನೇ ನಾವು ಒಂದಾಗಿರೋದು ಎಂದು ಹೇಳಿದ್ದಾರೆ.
Advertisement
Advertisement
ಕಳೆದ ಚುನಾವಣೆಯಲ್ಲಿ ಕೆಲವರು ನಾನು ಗೆಲ್ಲಬಾರದು, ಸಿಎಂ ಆಗಬಾರದು, ನಾನು ಗೆದ್ರೆ ಖರ್ಗೆ, ಪರಮೇಶ್ವರ್ ಸಿಎಂ ಆಗಲ್ಲ ಎಂದು ಚೀಟಿ ಹಂಚಿದ್ರು. ಆದ್ರೀಗ ಸಿಎಂ ಆಗಿರೋದು ಯಾರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪು ಮಾಡಿಕೊಂಡ್ರು. ಚುನಾವಣೆಯ ಮೇಲೆ ಆಸಕ್ತಿ ಕಡಿಮೆ ಆಗಿದ್ದು ಇನ್ಮುಂದೆ ಎಲೆಕ್ಷನ್‍ಗೆ ನಿಲ್ಲಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಎಂದು ಓಡಾಡ್ತಿದ್ದೇನೆ. ಬಿಜೆಪಿ ವಿರುದ್ಧದ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದ್ರು. ಇಲ್ಲಿ ಬಿಜೆಪಿ ಗೆಲ್ಲಬಾರದು ನಾವು ಸೋತ್ರೆ ಸರ್ಕಾರ ಇರುತ್ತಾ, ಮೈತ್ರಿ ಅಭ್ಯರ್ಥಿ ಗೆಲ್ಬೇಕು ಎಂದು ಹೇಳಿದ್ರು.
Advertisement
ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಜಿ.ಟಿ ದೇವೇಗೌಡ ಜೊತೆಯಾಗಿ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ನಂಗೆ ಯಾವಾಗ್ಲೂ ಇಲವಾ ಕ್ಷೇತ್ರದಲ್ಲಿ ಲೀಡ್ ಬರುತ್ತೆ. ಆದ್ರೆ ಅದೇನಾಯ್ತೋ ಕಳೆದ ಚುನಾವಣೆಯಲ್ಲಿ ನಂಗೆ ನೀವು ಲೀಡ್ ಕೊಟ್ಟಿಲ್ಲ ಎಂದು ಜಿಟಿ ದೇವೇಗೌಡರ ಎದುರೇ ಮತದಾರರನ್ನು ಪ್ರಶ್ನಿಸಿದ್ರು.