ಮೈಸೂರು: ಲೋಕಸಭಾ ಚುನಾವಣೆಯಲ್ಲೂ ನೀವು ಜೊತೆಗೆ ಇರ್ತೀರಾ ಬಿಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಸಚಿವರ ಕಾಲೆಳೆದಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಇದು ಹಳೇ ದೋಸ್ತಿ. ಈಗ ಮುಂದುವರಿಯುತ್ತಿದೆ ಅಷ್ಟೇ. ಈ ಹಿಂದೆ ಕಯಬಂಳಿ ನಟರಾಜ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ, 30 ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡುವಂತೆ ತಿಳಿಸಿದ್ದೇವು. ಹೀಗಾಗಿ ನಾಳೆ ಹೊಸಬರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದರು.
Advertisement
ಬಿಜೆಪಿಯ ಅಭ್ಯರ್ಥಿ ಯಾರು ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾಳೆ… ನಾಳೆ ಬೆಳಗ್ಗೆ ಹೇಳುತ್ತೇವೆ ಎಂದು ಸಂಸದರು ನಗೆ ಹರಿಸಿದರು. ಇದನ್ನು ಓದಿ: ಬಿಜೆಪಿಗೆ ಮಾತು ಕೊಟ್ಟಿದ್ದೇವೆ, ದೋಸ್ತಿ ಕೈಬಿಡುವ ನಿರ್ಧಾರವಿಲ್ಲ: ಸಾರಾ ಮಹೇಶ್
Advertisement
Advertisement
ಲೋಕಸಭೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇರುತ್ತದೇಯೇ ಎಂದು ಮಾಧ್ಯಮದವರು ಸಚಿವ ಜಿ.ಟಿ.ದೇವೇಗೌಡ ಅವರಿಗೆ ಕೇಳಿದರು. ಈ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಸಚಿವ ಸಾರಾ ಮಹೇಶ್ ಅವರು, ಈಗ ಜೊತೆಯಾಗಿ ಇರುತ್ತೇವೆ. ಆದರೆ ಲೋಕಸಭೆಯಲ್ಲಿ ವಿರುದ್ಧವಾಗಿಯೇ ಮತ ಕೇಳುತ್ತೇವೆ ಎಂದರು. ಇದಕ್ಕೆ ನಗುತ್ತಲೇ ಪ್ರತ್ಯುತರ ಕೊಟ್ಟ ಸಂಸದ ಲೋಕಸಭೆಯಲ್ಲೂ ಜೊತೆಯಾಗಿಯೇ ಇರ್ತೀರಾ ಬಿಡಿ ಸಚಿವರ ಕಾಲೆಳೆದರು. ಇಬ್ಬರ ಮಧ್ಯ ನಿಂತಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಮಾತ್ರ ನಗುತ್ತಲೇ ನಿಂತಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv