Connect with us

Districts

ಬಿಇಎಂಎಲ್ ಆವರಣದಲ್ಲಿ ಚಿರತೆ ಪ್ರತ್ಯಕ್ಷ

Published

on

ಮೈಸೂರು: ಮೈಸೂರಿನ ಹೊರ ವಲಯದ ಹೂಟಗಳ್ಳಿಯಲ್ಲಿರುವ ಕೇಂದ್ರ ಸರ್ಕಾರದ ಬಿಇಎಂಎಲ್ ಸಂಸ್ಥೆ ಆವರಣ ಚಿರತೆಗಳ ವಾಸಸ್ಥಾನವಾಗಿದೆ.

ಬಿಇಎಂಎಲ್ ಸಂಸ್ಥೆಯು ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಈಗಾಗಲೆ ಈ ಆವರಣದಲ್ಲಿ ಸಾಕಷ್ಟು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಈಗ ಇದೇ ಆವರಣದಲ್ಲಿ ಎರಡು ಚಿರತೆಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಈ ದೃಶ್ಯವನ್ನು ಬಿಇಎಂಎಲ್ ಭದ್ರತಾ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆಗಳು ಇರುವುದನ್ನು ಅರಿತ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಬಿಇಎಂಎಲ್ ಆವರಣ ಕಿರು ಅರಣ್ಯದ ರೀತಿ ಆಗಿದ್ದು, ಹಲವು ಚಿರತೆಗಳು ಇಲ್ಲೇ ವಾಸಿಸುತ್ತಿವೆ. ಇದು ಸಿಬ್ಬಂದಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

Click to comment

Leave a Reply

Your email address will not be published. Required fields are marked *