ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಮೈಸೂರು ಪ್ರಕರಣ: ಕಾಂಗ್ರೆಸ್

Public TV
1 Min Read
MYS RAPE 5

– ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ

ಬೆಂಗಳೂರು: ಸಾಂಸ್ಕೃತಿಕ ನಗರಿ ಎನಿಸಿಕೊಂಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣವು ಕರ್ನಾಟಕ ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

BASAVARAJ BOMMAI

ಟ್ವೀಟ್‍ನಲ್ಲಿ ಏನಿದೆ?
ಹಿಂದೊಮ್ಮೆ ಮಾಧ್ಯಮ ವರದಿಗಾರ್ತಿಗೆ ಈಶ್ವರಪ್ಪ ಅವರು ಆಡಿದ ಅಸಂಬದ್ಧ ಮಾತುಗಳೇ ಬಿಜೆಪಿಯ ಮಹಿಳಾ ವಿರೋಧಿ ಧೋರಣೆ ಹಾಗೂ ಮಹಿಳಾ ರಕ್ಷಣೆಯ ಬಗೆಗೆ ಇರುವ ಉದಾಸೀನತೆ ತೋರುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರಾಜ್ಯದಲ್ಲೂ ಅತ್ಯಾಚಾರ ಪ್ರಕರಣಗಳು ಘಟಿಸುತ್ತಿವೆ. ಬಿಜೆಪಿ ಸದಾ ಜಪಿಸುವ ‘ಯುಪಿ ಮಾಡೆಲ್’ನ್ನು ರಾಜ್ಯದಲ್ಲಿ ಈ ಮೂಲಕ ಜಾರಿಗೊಳಿಸಲು ತೀರ್ಮಾನಿಸಿದೆ. ಚಾಮುಂಡಿ ಬೆಟ್ಟದಂತಹ ಪ್ರವಾಸಿತಾಣದಲ್ಲೂ ಪೊಲೀಸ್ ರಕ್ಷಣೆ, ಗಸ್ತು ಇಲ್ಲದಿರುವುದು ಸರ್ಕಾರದ ವೈಫಲ್ಯ ಗೃಹಸಚಿವರೇ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

ಯುವತಿಯನ್ನು ಅತ್ಯಾಚಾರವೆಸಗಿದ ಮಾಜಿ ಸಚಿವರ ರಕ್ಷಣೆ ನಿಂತಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆಯನ್ನೂ ಮಾಡುವಂತಿದೆ ಸರ್ಕಾರ. ಅತ್ಯಾಚಾರಿ ಶಾಸಕ, ಮಾಜಿ ಸಚಿವರನ್ನು ಹೊಂದಿದ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ! ಸಿದ್ದು ಸವದಿಯನ್ನು ರಕ್ಷಿಸಿದ ಮಹಿಳಾ ವಿರೋಧಿ ಬಿಜೆಪಿಯಿಂದ ಮಹಿಳೆಯರು ರಕ್ಷಣೆ ಬಯಸುವುದು ವ್ಯರ್ಥ. ಮೈಸೂರಿನಂತಹ ನಗರದಲ್ಲಿ ಅತ್ಯಾಚಾರ ಪ್ರಕರಣ ನಡೆದು 24 ಗಂಟೆಗೂ ಅಧಿಕ ಸಮಯ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಲಾಗದ್ದು ಆಡಳಿತದಲ್ಲಿ ಗೃಹ ಇಲಾಖೆಯ ಕಾರ್ಯಕ್ಷಮತೆ ಕುಸಿದಿರುವುದಕ್ಕೆ ಸಾಕ್ಷಿ. ಇದುವರೆಗೂ ಗೃಹಸಚಿವರು, ಬಿಜೆಪಿಯ ಮಹಿಳಾ ನಾಯಕಿಯರು ಸಂತ್ರಸ್ತೆಯನ್ನು ಭೇಟಿಯಾಗದಿರುವುದು ಬಿಜೆಪಿಯ ನಿರ್ಲಕ್ಷ್ಯ ಧೋರಣೆಗೆ ನಿದರ್ಶನ. ಇದನ್ನೂ ಓದಿ: ಗಲಾಟೆ ಮಾಡಿ ತಲೆಗೆ ಕಲ್ಲಲ್ಲಿ ಹೊಡೆದು ಹುಡುಗಿಯನ್ನು ದೂರ ಕರೆದೊಯ್ದು ರೇಪ್ ಮಾಡಿದ್ರು: ಯುವಕ

Share This Article
Leave a Comment

Leave a Reply

Your email address will not be published. Required fields are marked *