ಮೈಸೂರು: ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮೈಸೂರಿನ (Mysuru) ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.
ಗಾಯತ್ರಿ ಕೊಲೆಯಾದ ದುರ್ದೈವಿ. ಪಾಪಣ್ಣ ಕೊಲೆ ಮಾಡಿರುವ ಪತಿ. ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿ ಕುಡಿತದ (Alcohol) ಚಟಕ್ಕೆ ದಾಸನಾಗಿದ್ದ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ಅನಾಮಿಕನ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲು ಸಿದ್ಧತೆ
ಹಣಕ್ಕಾಗಿ ಪತ್ನಿ ಮಕ್ಕಳನ್ನು ಪೀಡಿಸುತ್ತಿದ್ದ. ಜಮೀನು ಮಾರಿ ಹಣ ನೀಡುವಂತೆ ಹೆಂಡತಿಯನ್ನ ಪೀಡಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗುವಾಗ ಮಗನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಹಂಪಿಯಲ್ಲಿ ಪ್ರವಾಸಿಗರ ದಂಡು – ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪರದಾಡಿದ ಜನ
ವಿಜಯನಗರ ಪೊಲೀಸ್ ಠಾಣೆಗೆ ಮಗ ದೂರು ನೀಡಿದ್ದು, ಆರೋಪಿ ಪಾಪಣ್ಣನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ