ಮೈಸೂರು: ಹುಣಸೂರು ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಕಿಂಗ್ ಆಗುತ್ತಾ ಅಥವಾ ಕಿಂಗ್ ಮೇಕರ್ ಆಗುತ್ತಾ?, ಬೈ ಎಲೆಕ್ಷನ್ ನ ಗೆಲುವಿನ ಲೆಕ್ಕಾಚಾರದಲ್ಲಿ ಜೆಡಿಎಸ್‍ನ ಪಾತ್ರ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಈ ರೀಪೋರ್ಟ್ ನಲ್ಲಿದೆ.
ಹುಣಸೂರು ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಿರೋದು ಯಾರನ್ನೂ ಸೋಲಿಸಲು ಅಥವಾ ಯಾರನ್ನೋ ಗೆಲ್ಲಿಸಲು ಅಲ್ಲ. ಬದಲಾಗಿ ನಾವೇ ಗೆಲ್ಲುವುದಕ್ಕೆ ಸ್ಪರ್ಧೆ ಮಾಡಿದ್ದೇವೆ ಅಂತ ದಳಪತಿಗಳು ಪದೇ ಪದೇ ಹೇಳುತ್ತಿದ್ದರು. ಆದರೆ, ಮತದಾನ ನಡೆದ ಮೇಲೆ ಜೆಡಿಎಸ್ ಸ್ಪರ್ಧೆ ಈ ಕ್ಷೇತ್ರದಲ್ಲಿ ಯಾರನ್ನೋ ಸೋಲಿಸುವ ಸಲುವಾಗಿಯೇ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲಿಗೆ ನಾವೇ ಕಿಂಗ್ ಅಂತ ಹೇಳುತ್ತಿದ್ದ ಜೆಡಿಎಸ್ ಮತದಾನದ ದಿನ ಕಿಂಗ್‍ಮೇಕರ್ ಸ್ಥಾನಕ್ಕೆ ಬಂದು ಕುಳಿತಿರೋದು ಸ್ಪಷ್ಟ.
Advertisement
Advertisement
ಹುಣಸೂರು ಉಪ ಚುನಾವಣೆಯ ಫಲಿತಾಂಶ ಜೆಡಿಎಸ್ ಪಡೆಯೋ ಮತಗಳ ಮೇಲೆ ನಿಂತಿದೆ. ಜೆಡಿಎಸ್‍ನ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ಸಿಗೆ ಶಿಫ್ಟ್ ಆಗಿವೆ ಅನ್ನೋ ಮಾತು ಮತದಾನದ ಬಳಿಕ ದಟ್ಟವಾಗಿ ಕೇಳಿ ಬರುತ್ತಿದೆ. ಅಲ್ಲಿಗೆ ಈ ಮಾತು ನಿಜವೇ ಆದರೆ ಈ ಫಲಿತಾಂಶದ ದಿಕ್ಕೂ ನಿರ್ಧಾರವಾಗುವುದು ಜೆಡಿಎಸ್ ಪಡೆಯೋ ಮತಗಳಿಂದ ಅನ್ನೋದು ಸ್ಪಷ್ಟ.
Advertisement
ಜೆಡಿಎಸ್ ಈ ಚುನಾವಣೆಯಲ್ಲಿ 30 ಸಾವಿರಕ್ಕಿಂತ ಹೆಚ್ಚು ಮತ ಪಡೆದರೆ ಅದು ಬಿಜೆಪಿ ಪಾಲಿಗೆ ವರವಾಗಲಿದೆ. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜೆಡಿಎಸ್ ಇಷ್ಟು ಮತ ದಾಟಲೇ ಬೇಕು. ಒಂದು ವೇಳೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಂತರೆ ಅದು ಕಾಂಗ್ರೆಸ್ಸಿಗೆ ವರವಾಗಲಿದೆ. ಕಾಂಗ್ರೆಸ್ ಗೆಲುವಿನ ಹಾದಿ ಹಿಡಿಯಬೇಕಾದರೆ ಜೆಡಿಎಸ್ ಮತಗಳು 25 ಸಾವಿರದ ಒಳಗೆ ನಿಲ್ಲಬೇಕು.
Advertisement
ಹೀಗಾಗಿಯೆ ಬಿಜೆಪಿ-ಕಾಂಗ್ರೆಸ್ ತಾವು ಪಡೆಯೋ ಮತಗಳ ಲೆಕ್ಕಕ್ಕಿಂತ ಜೆಡಿಎಸ್ ಪಡೆಯೋ ಮತಗಳು ಎಷ್ಟು ಎಂಬುದರ ಮೇಲೆ ಗೆಲುವಿನ ಲೆಕ್ಕ ಬರೆದಿವೆ. ಜೆಡಿಎಸ್ ತಾನು ಸೋತು ಹಳ್ಳಿಹಕ್ಕಿಯ ಗೆಲುವಿನ ರೆಕ್ಕೆ ತುಂಡು ಮಾಡುತ್ತಾ? ಅಥವಾ ಜೆಡಿಎಸ್ ತನ್ನ ವೋಟ್ ಬ್ಯಾಂಕ್ ತನ್ನಲ್ಲೇ ಉಳಿಸಿಕೊಂಡು ಕಾಂಗ್ರೆಸ್ ಕೈ ಕಟ್ ಮಾಡುತ್ತಾ ಎಂಬುದನ್ನು ಸೋಮವಾರದವರೆಗೆ ಕಾದು ನೋಡಬೇಕಿದೆ.