ಮೈಸೂರು: ಅರಮನೆ ನಗರಿಯಲ್ಲೊ ದೇಗುಲ ಪಾಲಿಟಿಕ್ಸ್ ಜೋರಾಗಿದೆ. 92 ದೇಗುಲ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ತಾ ಇದ್ದಂತೆ ಪ್ರತಾಪ್ ಸಿಂಹ ದೇಗುಲ ಉಳಿಸಿ ಅಭಿಯಾನಕ್ಕೆ ಇಳಿದಿದ್ದಾರೆ. ಮಾತ್ರವಲ್ಲ ಸಿಎಂ ಬೊಮ್ಮಾಯಿಯವರನ್ನ ಭೇಟಿ ಮಾಡಿ ಮನವಿ ಕೂಡ ಮಾಡಿದ್ದಾರೆ.
ಹೌದು. ಮೈಸೂರಿನಲ್ಲಿ ಇದೀಗ ಟೆಂಪಲ್ ಪಾಲಿಟಿಕ್ಸ್ ಜೋರಾಗಿದೆ. ಕಳೆದ ವಾರ ನಂಜನಗೂಡು ಸಮೀಪದ ಮಹಾದೇವಮ್ಮ ದೇಗುಲವನ್ನು ಜಿಲ್ಲಾಡಳಿತ ನೆಲಸಮ ಮಾಡಿರುವ ಘಟನೆಯಿಂದ ಕೆರಳಿರುವ ಪ್ರತಾಪ್ ಸಿಂಹ, ಜಿಲ್ಲಾಡಳಿತ ಮತ್ತು ಮುಜುರಾಯಿ ಇಲಾಖೆ ವಿರುದ್ಧ ಸಮರ ಸಾರಿದ್ದಾರೆ. ಹಿಂದೂಗಳ ದೇಗುಲಗಳೇ ಟಾರ್ಗೆಟ್ ಅಂತಾ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಜಿಲ್ಲಾಡಳಿತ, ಮುಜರಾಯಿ ಇಲಾಖೆ ವಿರುದ್ಧ ಸಮರ ಸಾರಿರುವ ಪ್ರತಾಪ್ ಸಿಂಹ, ದೇವಸ್ಥಾನ ಉಳಿಸಿ ಅಂತಾ ಅಭಿಯಾನ ಕೈಗೊಂಡಿದ್ದಾರೆ. ಈ ಸಂಬಂಧ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಫೋನಾಯಿಸಿರುವ ಸಂಸದರು, ಕೋರ್ಟ್ ಆದೇಶದಲ್ಲಿ ಎಲ್ಲಿಯೂ ದೇವಸ್ಥಾನ ತೆರವಿಗೆ ಸೂಚಿಸಿಲ್ಲ. ಕೂಡಲೇ ನಂಜನಗೂಡು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೂ ಅಗತ್ಯ ಸೂಚನೆಗಳನ್ನು ನೀಡಬೇಕು. 2009ರ ದೇವಸ್ಥಾನ ತೆರವಿಗೆ ಪರ್ಯಾಯ ಕ್ರಮ ಕೈಗೊಳ್ಳಿ. ದೇವಸ್ಥಾನ ತೆರವು ಬದಲು ಸ್ಥಳಾಂತರ ಮಾಡಿ ಅಂತಾ ಹೇಳಿದ್ದಾರೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದು ಕೇವಲ ಮೈಸೂರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ವಕ್ಫ್ ಬೋರ್ಡ್ ಮಾದರಿಯಲ್ಲಿ ರಾಜ್ಯದ ಎಲ್ಲಾ ಹಿಂದೂ ದೇಗುಲಗಳ ಸಂರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ, ಮತ್ತೊಮ್ಮೆ ದೇಗುಲ ಧ್ವಂಸವನ್ನು ಖಂಡಿಸಿದ್ದಾರೆ. ಏಕಾಏಕಿ ತೆರವು ಸರಿಯಲ್ಲ ಎಂದಿದ್ದಾರೆ. ಜೊತೆಗೆ ಈಗ ಪ್ರತಾಪ್ ಸಿಂಹ ಹೋರಾಟ ಮಾಡ್ತಿರೋದು ಯಾರ ವಿರುದ್ಧ..? ಅವ್ರದ್ದೇ ಸರ್ಕಾರ ಇದೆ ಅಲ್ವಾ..? ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ಮಾಡ್ಲಿ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ಈ ವಷಾರ್ಂತ್ಯದ ಹೊತ್ತಿಗೆ ಕೇವಲ ಮೈಸೂರಿನಲ್ಲಿಯೇ 92 ದೇಗುಲ ತೆರವು ಮಾಡಲು ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ದೇಗುಲ ಸಮರ ಮತ್ತಷ್ಟು ಕಾವು ಪಡೆದುಕೊಳ್ಳೋದ್ರಲ್ಲಿ ಯಾವುದೇ ಅನುಮಾನ ಇಲ್ಲ.