ಮೈಸೂರು: ಮಾಜಿ ಸಚಿವ ಜಿಟಿ ದೇವೇಗೌಡ ಜೆಡಿಎಸ್ ಸಭೆಗಳಿಗೆ ಗೈರಾದ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಅವರು ಎಲ್ಲಿಗೆ ಹೋಗಬೇಕು ಹೋಗಲಿ ಬಿಡಿ. ಜಿಟಿಡಿಯನ್ನು ಯಾರು ಹಿಡಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಂಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೆಗೌಡರ ಬಗ್ಗೆ ನಾನೇನು ಮಾತನಾಡಲ್ಲ. ದೇವೆಗೌಡರು ನನ್ನ ಗುರುಗಳಲ್ಲ ಎಂದು ಅವರು ಹೇಳಿದ್ದಾರೆ. ವೈಯಕ್ತಿವಾಗಿ ನಾನು ಯಾರನ್ನು ಟೀಕೆ ಮಾಡಲ್ಲ ಎಂದು ತಿಳಿಸಿದರು.
Advertisement
Advertisement
ಜಿಟಿಡಿ ಅವರ ಹೇಳಿಕೆಗಳನ್ನು ನಾನು ಕಿವಿಯಾರೆ ಕೇಳಿದ್ದೇನೆ. ನನಗೆ ಯಾರು ಗುರು ಇಲ್ಲ, ನನಗೆ ಕುಮಾರಸ್ವಾಮಿ ಗುರು ಅಲ್ಲ. ದೇವೇಗೌಡರು ಗುರುವಲ್ಲ. ರಾಜಕೀಯ ಕ್ಷೇತ್ರದಲ್ಲಿ ನಾನೇ ಸ್ವಂತ ಬೆಳೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಹೇಳಲಿ ಬಿಡಿ ಅದರ ಬಗ್ಗೆ ಯಾಕೆ ಕೇಳುತ್ತಿರಾ ಎಂದು ದೇವೇಗೌಡರು ಗರಂ ಆದರು.
Advertisement
ಈ ವೇಳೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದಿಂದ ಡಿಕೆಶಿ ಪರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾನೂನಿಗು ಜಾತಿಗೂ ಹೊಂದಾಣಿಕೆ ಮಾಡಬಾರದು. ಮೋದಿಯವರ ಸರ್ಕಾರದಲ್ಲಿ ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಯಾರು ರಾಜಕೀಯವಾಗಿ ಪ್ರತಿಭಟಿಸುತ್ತಾರೆ ಅವರ ವಿರುದ್ಧ ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಅಂತಿಮವಾಗಿ ಈ ಬಗ್ಗೆ ಕೋರ್ಟ್ ತೀರ್ಮಾನ ಮಾಡುತ್ತೆ. ನಿನ್ನೆಯ ಪ್ರತಿಭಟನೆ ಕೋರ್ಟ್ ಪರವು ಅಲ್ಲ ವಿರುದ್ಧವು ಅಲ್ಲ ಎಂದು ಹೇಳಿದರು.
Advertisement
ಡಿಕೆಶಿ ಪರ ನಿನ್ನೆಯ ಪ್ರತಿಭಟನೆಯಲ್ಲಿ ಜೆಡಿಎಸ್ ಪ್ರಮುಖರು ಭಾಗವಹಿಸದ ವಿಚಾರದ ಬಗ್ಗೆ ಮಾತನಾಡಿ, ಕುಮಾರಸ್ವಾಮಿಯವರು ಡಿಕೆಶಿ ಮನೆಗೆ ಹೋಗಿ ಅವರ ತಾಯಿಯನ್ನು ಮಾತನಾಡಿಸಿ ಬಂದಿದ್ದಾರೆ. ನಿನ್ನೆ ಬೇರೆ ಕಾರ್ಯಕ್ರಮದ ನಿಮಿತ್ ಕುಮಾರಸ್ವಾಮಿ ಮೈಸೂರಿಗೆ ಹೋಗಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ನನ್ನನ್ನು ಕರೆದರು. ಆದರೆ ನಾನು ಮಾಜಿ ಪ್ರಧಾನಿ ಪ್ರತಿಭಟನೆಯಲ್ಲಿ ಭಾಗವಹಿಸುವುದು ಯೋಗ್ಯವಲ್ಲ ಎಂದು ಹೋಗಿಲ್ಲ. ಕೋರ್ಟ್ ನಲ್ಲಿ ಏನು ತೀರ್ಮಾನವಾಗುತ್ತೆ ನೋಡೋಣ ಎಂದು ಹೇಳಿದ್ದೆ. ನಮ್ಮ ಎಂಎಲ್‍ಎ ಗಳು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.