– ಏನೂ ಆಗಲ್ಲ, ಧೈರ್ಯವಾಗಿರಿ ಎಂದಿದ್ದಾರೆ ಸಿಎಂ
ಮೈಸೂರು: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರು ಮಾಜಿ ಸಚಿವ ಸಾರಾ ಮಹೇಶ್ ವಿರುದ್ಧ ಗುಡುಗಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಫಿಲಂ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡವನಲ್ಲ. ಯಾರದ್ದೋ ಮನೆಯ ಲೋಟ ತೊಳೆದಿಲ್ಲ. ರಾಮದಾಸ್ ಮನೆ ಚಡ್ಡಿ ತೊಳೆದಿಲ್ಲ. ನಮ್ಮ ತಂದೆ ಆ ಕಾಲದಿಂದಲೂ ಜಮೀನ್ದಾರರು. ಆ ಕಾಲದಲ್ಲೇ ಕುರುಬ ಸಮಾಜಕ್ಕೆ ಜಮೀನು ಕೊಟ್ಟ ವಂಶ ನಮ್ಮದು ಎಂದು ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ಮಾಡಿದರು.
Advertisement
Advertisement
ನಾನು ದಿನದ ಖರ್ಚಿಗಾಗಿ ಯಾರನ್ನೂ ಕೇಳುವುದಿಲ್ಲ. ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ನಾವು ಐದು ತಲೆಮಾರಿನಿಂದ ಜಮೀನ್ದಾರರು. ಬಾಯಿಗೆ ಬಂದಂತೆ ಮಾತಾಡಬೇಡ. ನಾನು ಆಸ್ತಿ ಮಾರಿಕೊಂಡ ದಾಖಲೆ ಇದ್ದರೆ ತೆಗೆದುಕೊಂಡು ಪತ್ರಕರ್ತರ ಭವನಕ್ಕೆ ಬಾ. ಸಂವಿಧಾನದ ಮೇಲೆ ಆಣೆ ಇಟ್ಟು ಚರ್ಚೆ ಮಾಡೋಣ. ಅದನ್ನು ಬಿಟ್ಟು ಆ ದೇವಸ್ಥಾನಕ್ಕೆ ಬಾ ಈ ದೇವಸ್ಥಾನಕ್ಕೆ ಬಾ ಎಂದು ಮೆರೆಯಾಗಬೇಡ ಎಂದು ಸಾರಾ ಮಹೇಶ್‍ಗೆ ಅವಾಜ್ ಹಾಕಿದರು. ಇದನ್ನು ಓದಿ: ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್
Advertisement
ನಾನು ಯಾರ ಕುಟುಂಬಕ್ಕೂ ವಿಷ ಹಿಂಡಿಲ್ಲ. ನೀವು ಹಿಂಡಿದ ವಿಷದಿಂದ ಆ ಕುಟುಂಬದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಹೆಚ್‍ಡಿಕೆ ಅವರ ಸುತ್ತ ಇದ್ದ ಎಚ್. ವಿಶ್ವನಾಥ್ ಎಲ್ಲಿ ಹೋದರು? ಕುಮಾರಪರ್ವ ಮಾಡಿದ ಜಿಟಿಡಿ ಎಲ್ಲಿ. ಡಾ. ರಂಗಪ್ಪ, ಎಲ್.ಆರ್. ಶಿಮರಾಮೇಗೌಡ ಮತ್ತು ಪುಟ್ಟರಾಜು ಎಲ್ಲಿ ಹೋದರು. ಕುಮಾರಸ್ವಾಮಿ ಸುತ್ತ ಇದ್ದ ಈ ನಾಯಕರೆಲ್ಲ ಯಾಕೆ ಅವರಿಂದ ದೂರವಾದರು. ಹೆಚ್‍ಡಿಕೆ ಅವರ ನಾಯಕತ್ವ ಬಲಹೀನವಾಗಬಾರದು. ಯಾರೋ ಒಬ್ಬ ಶಾಸಕನ ಮಾತು ಕೇಳಿಕೊಂಡು ನಾಯಕತ್ವ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
Advertisement
ನಮ್ಮ ಪದತ್ಯಾಗ ಪದವಿಗಾಗಿ ಅಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣ ವಿರೋಧಿಸಿ ರಾಜೀನಾಮೆ ಕೊಟ್ಟಿದ್ದು. ದುಡ್ಡಿಗಾಗಿ ಇಲ್ಲಿ ಯಾರು ಯಾರನ್ನೂ ಮಾರಿಕೊಂಡಿಲ್ಲ. ಕಳೆದು ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಎಂ.ಟಿ.ಬಿ. ನಾಗರಾಜ್ ಅವರ ಗುಂಪು 80 ಕೋಟಿ ರೂಪಾಯಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದು ಈ ಹಣ ಕೊಟ್ಟರು. ಈಗ ಅವರೇ ಇವರು ದುಡ್ಡಿಗಾಗಿ ಮಾರಿಕೊಂಡರು ಎಂದು ಹೇಳುತ್ತಿದ್ದಾರೆ ಎಂದು ಸಿದ್ದು ವಿರುದ್ಧವೂ ಕಿಡಿಕಾರಿದರು.
ಏನೂ ಆಗಲ್ಲ, ಧೈರ್ಯವಾಗಿರಿ. ಖುದ್ದಾಗಿ ನಾನೇ ವಕೀಲರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಕೆಲ ಅನರ್ಹ ಶಾಸಕರು ಸಿಎಂ ಭೇಟಿ ಮಾಡಿದ್ದಾರೆ ಇದು ಸಾಮಾನ್ಯ ಭೇಟಿ ಅಷ್ಟೇ. ವಿಶೇಷ ಅರ್ಥ ಇಲ್ಲ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಮ್ಮ ಕೇಸ್ ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರಿಯಾದ ಮಾದರಿಯಲ್ಲಿ ರಾಜೀನಾಮೆ ಕೊಟ್ಟಿದ್ದೇವೆ. ರಾಜೀನಾಮೆಯ ಎಲ್ಲಾ ಬೆಳವಣಿಗೆಗಳು ಸುಪ್ರೀಂ ಕೋರ್ಟ್ ಗಮನದಲ್ಲಿದೆ. ಸುಪ್ರೀಂ ಕೋರ್ಟ್ ನಮ್ಮ ಅರ್ಹತೆಯನ್ನು ಎತ್ತಿಹಿಡಿಯಬೇಕು. ಇಲ್ಲವೇ ಅದನ್ನು ರದ್ದು ಮಾಡಬೇಕು ಅಥವಾ ಈ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ನಾಳೆ ಈ ಬಗ್ಗೆ ಸುಪ್ರೀಂ ಕೋರ್ಟ್ ಒಂದು ನಿರ್ಧಾರ ಪ್ರಕಟಿಸಲಿದೆ. ನಮ್ಮ ರಕ್ಷಣೆಗೆ ನ್ಯಾಯಾಲಯ ಬರಬೇಕಿದೆ ಎಂದು ವಿಶ್ವನಾಥ್ ತಿಳಿಸಿದರು.